ಕಡೂರು: ಪಟ್ಟಣದ ಜೆಸಿಐ ಕಡೂರು ಸ್ವರ್ಣಶ್ರೀಯಿಂದ ಸಪ್ತಾಹದ ಪ್ರಯುಕ್ತ ಜೆಸಿಐ ಭವನದಲ್ಲಿ ಸಂಸ್ಥೆಯ ಸದಸ್ಯರ ಕುಟುಂಬ ಸಮ್ಮಿಲನದ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಭಾರತೀಯ ಸಾಂಸ್ಕೃತಿಕ ಉಡುಪಿನಲ್ಲಿ ಮಿಸ್ಸಸ್ ಜೆಸಿಐ ಕಡೂರು ಸ್ವರ್ಣಶ್ರೀ 2025 ಸ್ಪರ್ಧೆಯನ್ನು 40 ವರ್ಷದೊಳಗಿನ ವಿಭಾಗದ ಹಾಗೂ 40 ವರ್ಷ ಮೇಲ್ಪಟ್ಟವರ ಎರಡು ರೀತಿಯ ಗುಂಪುಗಳಾಗಿ ಆಯೋಜಿಸಲಾಗಿತ್ತು. 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸುಜಾತಾ ಶಿವಕುಮಾರ್ (ಪ್ರ), ಮಂಜುಳಾ ಪ್ರಕಾಶ್ (ದ್ವಿ), ಕಲ್ಪನಾ ಹುಲಿಯಪ್ಪ (ತೃ), ಮಿಸಸ್ ಜೆಸಿಐ ಶೋಭಾ ನಾಗೇಂದ್ರ ವಿಜೇತರಾದರು. 40 ವರ್ಷ ಒಳಗಿನ ವಿಭಾಗದಲ್ಲಿ ಮಮತಾ ರಾಮಸ್ವಾಮಿ (ಪ್ರ), ಅನುಷಾ (ದ್ವಿ), ಭೂಮಿಕಾ (ತೃ) ಸ್ಥಾನ ಪಡೆದಿದ್ದಾರೆ ಎಂದು ಜೆಸಿಐ ಕಡೂರು ಸ್ವರ್ಣಶ್ರೀ ಘಟಕದ ಅಧ್ಯಕ್ಷೆ ಆಶಾ ಶ್ರೀನಿವಾಸ್‌ಮೂರ್ತಿ ತಿಳಿಸಿದರು. ವಲಯಾಧ್ಯಕ್ಷ ವಿಜಯ್‌ಕುಮಾರ್, ಪುಷ್ಪಾ ವಿಜಯಕುಮಾರ್, ಸಹಕಾರ್ಯದರ್ಶಿ ಅನಿತಾ ಕಿರಣ್, ತಾರಾ, ಮೀನಾ, ನಿಶಾ, ನಾಗಮ್ಮ ಮತ್ತಿತರರಿದ್ದರು.