ನ್ಯೂಸ್

ಮಾವುತ ಮತ್ತು ಕಾವಡಿಗಳು ಹಾಗೂ ಕುಟುಂಬಸ್ಥರ ಪ್ರವಾಸ

ದಸರಾ ಮಹೋತ್ಸವಕ್ಕೆ ಗಜಪಡೆಯೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಡಿಗಳು ಹಾಗೂ ಕುಟುಂಬಸ್ಥರು ಶನಿವಾರ ಪ್ರವಾಸ ಹಮ್ಮಿಕೊಂಡು ರಿಲ್ಯಾಕ್ಸ್ ಮೂಡ್‌ಗೆ ಜಾರಿದರು.

ಅರಣ್ಯ ಇಲಾಖೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಾವುತ, ಕಾವಾಡಿಯ ಮಕ್ಕಳು, ಪತ್ನಿಯರು ಸೇರಿ ಕುಟುಂಬಸ್ಥರಿಗೆ ಒಂದು ದಿನ ಪ್ರವಾಸ ಹಮ್ಮಿಕೊಂಡಿದ್ದು, ನಗರದ ಹೊರ ವಲಯದಲ್ಲಿರುವ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ಗೆ ಕರೆದೊಯ್ಯಲಾಗಿತ್ತು. ಮಾವುತರು ಮಕ್ಕಳು, ಪತ್ನಿ, ಸೋದರ-ಸೋದರಿಯರು ಸೇರಿದಂತೆ 130 ಮಂದಿ ಜಿಆರ್‌ಎಸ್ ಫ್ಯಾಂಟಿಸಿ ಪಾರ್ಕ್‌ನಲ್ಲಿ ಇರುವ ವಿವಿಧ ಕ್ರೀಡೆಯಲ್ಲಿ ತೊಡಗಿಸಿಕೊಂಡು ಇಡೀ ದಿನ ಮೋಜು-ಮಸ್ತಿ ಮಾಡಿ ಸಂಭ್ರಮಿಸಿದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಯೊಂದಿಗೆ 300 ಮಂದಿ ಟೆಂಟ್‌ಗಳಲ್ಲಿ ವಾಸವಿದ್ದು, ಇವರನ್ನು ಎರಡು ಬ್ಯಾಚ್‌ಗಳ ಮೂಲಕ ಈ ಬಾರಿ ಜಿಆರ್‌ಎಸ್ ಫ್ಯಾಂ ಟಸಿ ಪಾರ್ಕ್‌ಗೆ ಕರೆದ್ಯೊಯುತ್ತಿದ್ದು, ಮೊದಲ ಬ್ಯಾಚ್ ಇಂದು ಪ್ರವಾಸ ಮಾಡಿದೆ. ಮುಂದಿನ ವಾರ 170 ಮಂದಿಯ ಮತ್ತೊ ಂದು ಬ್ಯಾಚ್ ಅನ್ನು ಜಿಆರ್‌ಎಸ್‌ಗೆ ಕರೆದುಕೊಂಡು ಹೋಗ ಲಾವುದು ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ತಿಳಿಸಿದರು.