ನ್ಯೂಸ್

ಮಾವು ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಗೆ ೪೦.೪೩ ಕೋಟಿ ರೂ.ಗಳ ಹಣ ಸಂದಾಯ / ಜಿಲ್ಲಾಧಿಕಾರಿ ಎಂ.ಆರ್.ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾವಿಗೆ ಘೋಷಣೆ ಮಾಡಿದ ಬೆಂಬಲ ಬೆಲೆ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಮಾವು ಬೆಳೆಗಾರರ ಖಾತೆಗಳಿಗೆ ಶೇ.೯೭.೨೮ ರಷ್ಟು ಬಿಲ್ಲುಗಳಿಗೆ ಹಣ ಜಮೆ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಮಾವು ಬೆಂಬಲ ಬೆಲೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮಾವಿಗೆ ದಿಢೀರನೆ ಬೆಲೆ ಕುಸಿತ ಕಾರಣ ರೈತರು ಬೀದಿಗೆ ಬೀಳುವಂತೆ ಆಗಿತ್ತು. ಆಗ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂಧಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕೆಜಿಗೆ ೪ ರೂ. ಬೆಂಬಲ ಬೆಲೆ ಘೋಷಿಸಿ ಖರೀದಿಗೆ ಮುಂದಾಗಿದ್ದವು. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರು ಸಲ್ಲಿಸಿದ್ದ ಅರ್ಜಿಗಳಿಗೆ ಅವರ ಖಾತೆಗಳಿಗೆ ಹಣ ಜಮೆ ಆಗಿದೆ ಎಂದು ತಿಳಿಸಿದರು.

ತಾಂತ್ರಿಕ ದೋಷದಿಂದ ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅರ್ಹ ರೈತರಿಗೆ ಮಾವು ಬೆಳೆ ಮಾರಾಟದ ವ್ಯತ್ಯಾಸ ಹಣವನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದರು.

ಕೋಲಾರ ಜಿಲ್ಲೆಗೆ ಸಂಬAಧಿಸಿದAತೆ ಒಟ್ಟು ೨೮೧೦೫ ಬಿಲ್‌ಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ ಬಿಲ್ ಗಳ ಮೊತ್ತ ರೂ. ೪೧,೫೬,೪೪,೭೮೪ ಆಗಿದೆ. ಪ್ರಸ್ತುತ ೨೭೨೪೭ ಬಿಲ್ ಗಳ ಮೊತ್ತ ರೂ ೪೦,೪೩,೩೦,೬೨೫ ಗಳನ್ನು ಈಗಾಗಲೇ ಪಾವತಿಸಲಾಗಿದೆ. ಇದರಿಂದ ಒಟ್ಟು ಶೇ.೯೭.೨೮ ರಷ್ಟು ರೈತರ ಬಿಲ್‌ಗಳನ್ನು ಪಾವತಿಸಲಾಗಿದ್ದು, ಉಳಿದ ರೈತರ ಬಿಲ್‌ಗಳನ್ನು ತಾಂತ್ರಿಕ ದೋಷಗಳಿಂದ ಪಾವತಿ ಮಾಡಲಾಗಿರುವುದಿಲ್ಲ. ಈಬಿಲ್‌ಗಳನ್ನು ಸಹ ತಾಂತ್ರಿಕ ದೋಷ ಸರಿಪಡಿಸಿ ೧೦ ದಿನಗಳಲ್ಲಿ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.

ರೈತರು ಮಾವು ಮಾರಾಟಕ್ಕೂ ಮೊದಲು ನೋಂದಣಿ ಮಾಡಿಕೊಡಿದ್ದು, ಮಾವಿನ ಉತ್ಪನ್ನವನ್ನು ಮಾರಾಟ ಮಾಡಿದ ನಂತರ ಆನ್‌ಲೈನ್ ನೋಂದಣಿ ಪ್ರಮಾಣ ಪತ್ರದ ಜೊತೆಯಲ್ಲಿ ಆಧಾರ್ ಕಾರ್ಡ್ ನಕಲು ಪ್ರತಿ, ತೂಕದ ಚೀಟಿಯನ್ನು ನೀಡಿರಬೇಕು. ಅದು ಎಪಿಎಂಸಿ ಅಧಿಕೃತ ವರ್ತಕರು ಮತ್ತು ಸಂಸ್ಕರಣ ಘಟಕಗಳು ನೀಡಿದ ಲೆಕ್ಕ ತೀರುವಳಿ ಪಟ್ಟಿ, ಖರೀದಿ ಬಿಲ್‌ಅನ್ನು ಲಗತ್ತಿಸಿ ಎಪಿಎಂಸಿ ಕಾರ್ಯದರ್ಶಿ ಅಧೀನದ ದಾಖಲಾತಿ ಸಂಗ್ರಹಣೆ ತಂಡಕ್ಕೆ ಸಲ್ಲಿಸಿ ಸ್ವೀಕೃತಿ ಪಡೆದಿರಬೇಕು. ಈ ಯೋಜನೆಯಡಿ ಪ್ರತಿ ಎಕರೆಗೆ ೨೦ ಕ್ವಿಂಟಾಲ್‌ನAತೆ ಗರಿಷ್ಠ ೫ ಎಕರೆಗೆ ೧೦೦ ಕ್ವಿಂಟಾಲ್‌ವರೆಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದರು.

ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕ ರವಿಕುಮಾರ್, ಮಾವು ಅಭಿವೃದ್ಧಿ ಮಂಡಳಿ ಉಪನಿರ್ದೇಶಕಿ ಅಸ್ಮಾ, ಮುಳಬಾಗಿಲು, ಕೋಲಾರ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೧೩ ಕೆ.ಎಲ್.ಆರ್. ೦೫ : ಜಿಲ್ಲಾಧಿಕಾರಿ ಎಂ.ಆರ್.ರವಿ ರವರ ಅಧ್ಯಕ್ಷತೆಯಲ್ಲಿ ನಡೆದ ಮಾವು ಬೆಂಬಲ ಬೆಲೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕ ರವಿಕುಮಾರ್, ಮಾವು ಅಭಿವೃದ್ಧಿ ಮಂಡಳಿಯ ಉಪನಿರ್ದೇಶಕಿ ಅಸ್ಮಾ ಮುಂತಾದವರು ಇದ್ದರು.