ನ್ಯೂಸ್

ಮಾವಿಗೆ ಮಚ್ಚೆ ರೋಗ / ಆತಂಕಕ್ಕೆ ಒಳಗಾಗಿರುವ ರೈತರು / ಕೀಟಭಾದೆಯಿಂದ ರಕ್ಷಿಸಿಕೊಳ್ಳಲು ರಕ್ಷಣಾ ಕವಚಗಳನ್ನು ಬಳಸಿದರೂ ಬಿಡದ ಆಂತರಾಕ್ಸ್ ರೋಗ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಮಾವಿನ ಕಾಯಿಯನ್ನು ಕೀಟಭಾದೆಗಳಿಂದ ರಕ್ಷಣೆ ಮಾಡಿಕೊಳ್ಳಲು ಕಾಯಿ ೧೦೦ ಗ್ರಾಂಗಿAತ ಹೆಚ್ಚು ಗಾತ್ರ ಹೊಂದಿದಾಗ ರಕ್ಷಣಾ ಕವಚಗಳನ್ನು ಕಟ್ಟುತ್ತಾರೆ. ಕೆಲವು ನಿಯಮಗಳನ್ನು ಪಾಲಿಸದೆ ರಕ್ಷಣಾ ಕವರ್‌ಗಳನ್ನು ಕಾಯಿಗೆ ಕಟ್ಟಿರುವುದು ಆಂತ್ರಾಕ್ಸ್ ರೋಗ ಬರಲು ಕಾರಣವಾಗಿದ್ದು, ಇದರಿಂದ ಮಾವು ಬೆಳೆಗಾರರು ಆತಂತಕ್ಕೆ ಒಳಗಾಗಿದ್ದಾರೆ.

ಇತ್ತೀಚೆಗೆ ಮಾವಿನಕಾಯಿಯನ್ನು ಕೀಟಭಾದೆಗಳಿಂದ ರಕ್ಷಣೆ ಮಾಡಿಕೊಳ್ಳಲು ಕಳೆದ ಮೂರು ವರ್ಷಗಳಿಂದ ಮಾವಿನ ಮರಗಳಲ್ಲಿ ಹೂವು ಬಿಟ್ಟ ನಂತರ ಪಿಂದೆ ನೂರು ಗ್ರಾಂಗಿAತ ಹೆಚ್ಚು ಗಾತ್ರವಾದ ನಂತರ ರಕ್ಷಣಾ ಕವಚವಾಗಿ ಕವರುಗಳನ್ನು ಕಟ್ಟುತ್ತಾರೆ. ಕವರುಗಳನ್ನು ಕಟ್ಟಿದ ನಂತರವೂ ಮಾವಿನಕಾಯಿಗೆ ಆಂತ್ರಾಕ್ಸ್ ರೋಗ ಕಾಣೀಸಿಕೊಳ್ಳುತ್ತಿದೆ.

ಶ್ರೀನಿವಾಸಪುರ ತಾಲ್ಳೂಕು ಲಕ್ಷಿö್ಮÃಸಾಗರದ ಬಳಿಯೇ ಹನುಮೇಗೌಡರ ತೋಟದಲ್ಲಿ ಮಾವಿನ ಕಾಯಿಗೆ ರಕ್ಷಣಾ ಕವಚಗಳಾಗಿ ಕವರುಗಳನ್ನು ಕಟ್ಟದ್ದರೂ ಸಹ ಆಂತ್ರಾಕ್ಸ್ ರೋಗ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊAಡ ರೈತ ಕವರುಗಳನ್ನು ಬಿಚ್ಚಿದ್ದಾನೆ. ಬೆನಿಷಾ ಎಂಬ ತಳಿಯ ಕಾಯಿಗಳ ಮೇಲೆ ಕಪ್ಪು ಮಚ್ಚೆ ಕಾಣಿಸಿಕೊಂಡಿದೆ.

ಈ ಆಂತ್ರಾಕ್ಸ್ ರೋಗದ ಕಪ್ಪು ಮಚ್ಚೆ ತೇವಾಂಶ ಹೆಚ್ಚಾದಾಗ ಕಾಯಿ ಮೇಲೆ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷ ತೇವಾಂಶ ಹೆಚ್ಚಾಗಿ ಮಾವಿನ ಸುಗ್ಗಿ ಮುಗಿಯುವ ಹಂತದಲ್ಲಿ ಕೆಲವು ತೋಟಗಳಲ್ಲಿ ಆಂತ್ರಾಕ್ಸ್ ರೋಗ ಕಾಣಿಸಿಕೊಂಡು ಕಾಯಿ ಮೇಲೆ ಕಪು ಮಚ್ಚೆ ಮೂಡುವಂತಾಗಿ ಕಾಯಿ ಹಣ್ಣಾದರೂ ತಿನ್ನಲು ಯೋಗ್ಯ ಅಲ್ಲದ ರೀತಿಯಾಯಿತು. ಇದರಿಂದ ಸಾಕಷ್ಟು ರೈತರು ಆತಂಕಕ್ಕೆ ಒಳಗಾದರು.

ಮೇ ೨ನೇ ವಾರದಲ್ಲಿ ಮಾವು ಮಾರುಕಟ್ಟೆ ಪ್ರವೇಶ ಮಾಡುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಆಂತರಾಕ್ಸ್ ರೋಗ ಕಾಣಿಸಿಕೊಳ್ಳತೊಡಗಿದೆ. ರೈತರಲ್ಲಿ ಮತ್ತಷ್ಟು ಆತಂಕ ಮೂಡುವಂತೆ ಆಗಿದೆ. ಈಗ ಮಾವಿಗೆ ಉತ್ರಮ ವಾತಾವರಣವಿದ್ದರೂ ಕಾಯಿ ಮೇಲೆ ಕಪ್ಪು ಮಚ್ಚೆ ಕಾಣಿಸಿಕೊಳ್ಳುತ್ತಿರುವುದರಿಂದ ಮತ್ತಷ್ಟು ಆತಂಕಕ್ಕೆ ರೈತರು ಒಳಗಾಗಿದ್ದಾರೆ.

ಕೋಟ್

ಮಾವಿನಕಾಯಿಗೆ ರಕ್ಷಣಾ ಕವಚವಾಗಿ ಕವರುಗಳನ್ನು ಕಟ್ಟುವಾಗ ಕೀಟಭಾದೆಯ ಔಷಧಿಯನ್ನು ಸಿಂಪಡಣೆ ಮಾಡಿ ನಂತರ ಕವರುಗಳನ್ನು ಕಟ್ಟಬೇಕು. ಮಾವಿನ ಕಾಯಿಗಗೆ ತೊಟ್ಟಿನ ಪಕ್ಕದಲ್ಲಿ ಒಣಗಿದ ಮತ್ತೊಂದು ತೊಟ್ಟು ಇರುತ್ತದೆ. ಅದರಲ್ಲಿ ಆಂತರಾಕ್ಸ್ ರೋಗದ ಲಕ್ಷಣಗಳು ಇರುತ್ತವೆ. ಅದನ್ನು ಹೊರತುಪಡಿಸಿ ಕವರನ್ನು ಕಟ್ಟಬೇಕು. ಒಣಗಿದ ತೊಟ್ಟು ಸೇರಿಸಿ ಕಟ್ಟುವುದರಿಂದ ಕಾಯಿಗೆ ಮಚ್ಚೆ ರೋಗ ಬರುತ್ತದೆ. ಕಳೆದ ಮೂರು ವರ್ಷಗಳಿಂದ ಪ್ರಥಮವಾಗಿ ಈ ವರ್ಷ ಈ ಆಂತರಾಕ್ಸ್ ರೋಗ ಕಾಣಿಸಿಕೊಂಡಿದೆ.

-ಬೈರಾರೆಡ್ಡಿ, ನಿವೃತ್ತ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.

ಕೋಟ್

ಕಳೆದ ೩ ವರ್ಷಗಳಿಂದ ಮಾವಿನ ಕಾಯಿಗಳಿಗೆ ಯಾವುದೇ ಕೀಟಭದೆ ತಗಲದಂತೆ ರಕ್ಷಣಾ ಕವಚಗಳನ್ನು ಕಟ್ಟಲಾಗುತ್ತಿದೆ. ಇದುವರೆವಿಗೂ ಈ ರೀತಿಯ ಮಚ್ಚೆ ರೋಗ ಕಾಣಿಸಿಕೊಂಡಿಲ್ಲ. ಕಾಯಿಗೆ ಕವರ್ ಕಟ್ಟುವಲ್ಲಿ ಕಾಯಿ ಮೇಲೆ ತೇವಾಂಶ ಇದ್ದರೆ ಈ ರೀತಿ ಮಚ್ಚೆ ರೋಗ ಬರುತ್ತದೆ. ಕವರ್ ಕಟ್ಟುವ ಸಂದರ್ಭದಲ್ಲಿ ಕಾಯಿ ಮೇಲೆ ತೇವಾಂಶ ಇರಬಾರದು. ಉತ್ತಮ ವಾತಾವರಣ ಇರುವ ಸಂದರ್ಭದಲ್ಲಿ ಕವರನ್ನು ಕಟ್ಟಬೇಕು. ಇದು ಕೆಲವೊಂದು ತೋಟಗಳಲ್ಲಿ ಮಾತ್ರ ಈ ವರ್ಷ ಕಾಣಿಸಿಕೊಂಡಿದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಆಗಾಗ ಕವರುಗಳನ್ನು ಬಿಚ್ಚಿ ಪರೀಕ್ಷಿಸಿಕೊಳ್ಳಬೇಕು.

-ರಾಜಾರೆಡ್ಡಿ, ಮಾವು ಬೆಳೆಗಾರರು.

ಚಿತ್ರ ೩೦ ಕೆ.ಎಲ್.ಆರ್. ೦೧ : ಮಾವಿನಕಾಯಿಗಳಿಗೆ ಕೀಟಭಾದೆ ಬಾರದಂತೆ ರಕ್ಷಣಾ ಕವರುಗಳನ್ನು ಕಟ್ಟಿದ್ದರೂ ಆಂತರಾಕ್ಸ್ ಎಂಬ ಮಚ್ಚೆರೋಗ ಕಾಯಿಗಳ ಮೇಲೆ ಕಾಣಿಸಿಕೊಂಡಿರುವುದು.

ಚಿತ್ರ ೩೦ ಕೆ.ಎಲ್.ಆರ್. ೦೧ಎ : ಬೈರಾರೆಡ್ಡಿ, ನಿವೃತ್ತ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.

ಚಿತ್ರ ೩೦ ಕೆ.ಎಲ್.ಆರ್. ೦೧ಬಿ : ರಾಜಾರೆಡ್ಡಿ, ಮಾವು ಬೆಳೆಗಾರರು.