ವಿಜಯವಾಣಿ ಸುದ್ದಿಜಾಲ ಕೋಲಾರ
ಮಾವಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮುಂದಾಗಿರುವುದರಿAದ ಮಾವಿಗೆ ಬೆಂಬಲ ಬೆಲೆ ನೀಡಬೇಕೆಂದು ಜೂ.೨೪ ರಂದು ಮಾವು ಬೆಳೆಗಾರರು ಮತ್ತು ರೈತ ಸಂಘಟನೆಗಳು ಕೋಲಾರ ಚಿಕ್ಕಬಳ್ಳಾಪುರ ಬಂದ್ ಮಾಡುವುದನ್ನು ಸದ್ಯಕ್ಕೆ ಕೈಬಿಟ್ಟಿದ್ದಾರೆ.
ಸರ್ಕಾರ ಸೋಮವಾರದ ಒಳಗಾಗಿ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಮಂಗಳವಾರ ಬಂದ್ ಮಾಡುವುದಾಗಿ ಮಾವು ಬೆಳೆಗಾರರು ಮತ್ತು ರಐತ ಸಂಘಟನೆಗಳ ಮುಖಂಡರು ನಿರ್ಧರಿಸಿದ್ದರು. ಭಾನುವಾರ ಪೂರ್ವಭಾವಿ ಸಭೆ ನಡೆಸಿ ಅಧಿಕೃತ ಘೋಷಣೆ ಮಾಡಲು ಸಿದ್ಧರಿದ್ದರು. ಶನಿವಾರ ರಾತ್ರಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ಕೇಂದ್ರ ಸರ್ಕಾರ ಕೆ.ಜಿ.ಗೆ ೨ ರೂ. ಮತ್ತು ರಾಜ್ಯ ಸರ್ಕಾರ ೨ ರೂ. ಸೇರಿ ಒಟ್ಟು ೪ ರೂ.ಗಳು ನೀಡುವುದಾಗಿ ತಿಳಿಸಿರುವುದರಿಂದ ಸದ್ಯಕ್ಕೆ ಬಂದ್ ವಿಚಾರ ಕೈಬಿಡಲಾಗಿದೆ ಎಂದು ರೈತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಸೋಮವಾರ ಅಧಿಕೃತ ಘೋಷಣೆ ಹೊರಬಿದ್ದ ನಂತರ ಅದು ಯಾವ ರೀತಿ ಕಾರ್ಯಗತಗೊಳ್ಳುತ್ತದೆ ಎಂಬುದರ ನಂತರ ರೈತ ಸಂಘಟನೆಗಳವರು ಚರ್ಚೆ ನಡೆಸಿ ರೈತರಿಗೆ ಯಾವ ರೀತಿ ಬೆಂಬಲ ಬೆಲೆ ಕೈಸೇರುತ್ತದೆ ಎಂಬುದನ್ನು ಕಾದು ನೋಡಿ ನಂತರ ತೀರ್ಮಾನಿಸುವುದಾಗಿ ರೈತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಬೆಂಬಲ ಬೆಲೆಯಿಂದ ಅಸಮಾಧಾನ :
ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ೫ ಲಕ್ಷದಿಂದ ೬ ಲಕ್ಷ ಟನ್ ರಷ್ಟು ಮಾವು ಮರಗಳಲ್ಲಿಯೇ ಉಳಿದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಚೆ ಮಾಡಿಸಿ ೨.೫ ಲಕ್ಷ ಟನ್ ಮಾವಿಗೆ ಬೆಂಬಲ ಬೆಲೆ ನೀಡಲು ನಿರ್ಧಾರ ಕೈಗೊಂಡಿರುವುದು ರೈತರಲ್ಲಿ ಅಸಮಾಧಾನ ತಂದಿದೆ. ಇನ್ನು ಸರ್ಕಾರ ಚರ್ಚೆ ಹಂತದಲ್ಲೇ ಇದೆ. ಅಧಿಕೃತ ಘೋಷಣೆ ಮಾಡಿಲ್ಲ. ಸರ್ಕಾರ ಜಾಣತನ ತೋರಿಸುತ್ತಿದೆ ಎಂದು ರೈತರು ಅಸಮಾಧಾನ ಹೊರ ಹಾಕಿದ್ದಾರೆ.
ಕೋಟ್
ಮಾವಿಗೆ ಬೆಂಬಲ ಬೆಲೆ ನೀಡುವುದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಚೆ ಮಾಡಿದೆಯೇ ಹೊರತು ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಕೇವಲ ೨.೫ ಲಕ್ಷ ಟನ್‌ಗೆ ಮಾತ್ರ ಬೆಂಬಲ ಬೆಲೆ ನೀಡಿದರೆ ಉಳಿದ ಕಾಯಿಗೆ ಯಾರು ಬೆಂಬಲ ಬೆಲೆ ನೀಡುವರು. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ೬ ಲಕ್ಷಕ್ಕೂ ಹೆಚ್ಚು ಟನ್ ಮಾವು ಮರಗಳಲ್ಲಿಯೇ ಉಳಿದಿದೆ. ಕಾಟಾಚಾರಕ್ಕೆ ಬೆಂಬಲ ಬೆಲೆ ನೀಡುತ್ತೇವೆಂದು ತಿಳಿಸಿ ರೈತರ ಕಣ್ಣೀರು ಒರೆಸುವ ಕೆಲಸ ಸರ್ಕಾರಗಳು ಮಾಡುತ್ತಿವೆ. ಈಗಾಗಲೇ ಮಾವು ಕೆ.ಜಿ.ಗೆ ೨ ರೂ.ಗಳಿಂದ ೩ ರೂ.ಗಳಿಗೆ ಮಾರಾಟ ಮಾಡಿದರೆ ಗತಿಯೇನು. ಇನ್ನು ಒಂದು ವಾರದಲ್ಲಿ ಮಾವು ಮರಗಳಲ್ಲಿ ಕಾಯಿ ಖಾಲಿಯಾಗುತ್ತದೆ. ಈಗಾಗಲೇ ಹಣ್ಣಾಗಿ ಉದುರುತ್ತಿವೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬAತೆ ೨.೫ ಲಕ್ಷ ಟನ್‌ಗೆ ಬೆಂಬಲ ಬೆಲೆ ನೀಡಿ ಕೈತೊಳೆದುಕೊಳ್ಳಲು ಸರ್ಕಾರಗಳು ಮುಂದಾಗಿರುವುದು ಯಾವ ನ್ಯಾಯ ಕೊಟ್ಟರೆ ಎಲ್ಲಾ ಮಾವಿಗೂ ಬೆಂಬಲ ನೀಡಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ.
-ಪಿ.ಆರ್.ಸೂರ್ಯನಾರಾಯಣ, ಕೆ.ಪಿ.ಆರ್.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ.
ಚಿತ್ರ ೨೨ ಕೆ.ಎಲ್.ಆರ್. ೦೨ : ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ ರವರ ಭಾವಚಿತ್ರ
ಚಿತ್ರ ೨೨ ಕೆ.ಎಲ್.ಆರ್. ೦೨ಎ : ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು