ಚಿತ್ರದುರ್ಗ: ಕೋವಿಡ್ ಹಾಗೂ ಹೊಸ ವರ್ಷಾಚರಣೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಸ್ಪಿ ಜಿ.ರಾಧಿಕಾ ನಾಗರಿಕರಲ್ಲಿ ಮನವಿ ಮಾಡಿದರು. ಹೊಸ ವರ್ಷಾಚರಣೆಯ ನೆಪದಲ್ಲಿ ಪಾರ್ಟಿ,ಡಿಜೆ ಸೌಂಡ್,ಡ್ಯಾನ್ಸ್ ಮತ್ತಿತರ ಔತಣಕೂಟಗಳಿಗೆ ಅವಕಾಶವಿಲ್ಲ. ನಿಯಮ ಮೀರಿ ನಡೆದರೆ ಕಾಯ್ದೆಗಳಾನುಸಾರ ಬಂಧಿಸಲಾಗುವುದು.
ಬಂಧಿತರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ. ಗ್ರಾಪಂ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು 2021 ಜನವರಿ 2ನೇ ತಾರೀಖಿನವರೆಗೆ ವಿಸ್ತರಿಸುವಂತೆ ಡಿಸಿಗೆ ಮನವಿ ಮಾಡಲಾಗಿದೆ ಹಾಗೂ ಈ ಅವಧಿ ಹೋಟೆಲ್ ಮತ್ತಿತರೆಡೆ ವಿಶೇಷ ಔತಣಕೂಟಗಳಿಗೆ ಅವಕಾಶವಿಲ್ಲ.
ಆದರೆ ಶೇ.50 ಗ್ರಾಹಕರಿಗೆ ಮಾತ್ರ ಅವಕಾಶವನ್ನಾಧರಿಸಿ ಹೋಟೆಲ್,ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮಾಲೀಕರು ತಮ್ಮ ದೈನಂದಿನ ವಹಿವಾಟುಗಳನ್ನು ನಡೆಸಬಹುದು. ಪ್ರವಾಸಿ ತಾಣಗಳು,ಧಾರ್ಮಿಕ ಮಂದಿರ ಗಳಲ್ಲೂ ಮಾರ್ಗಸೂಚಿ ಉಲ್ಲಂಘನೆಯಾ ಗದಂತೆ ನೋಡಿಕೊಳ್ಳ ಬೇಕೆಂದು ಈಗಾಗಲೇ ಸಂಬಂಧಿಸಿದವರಿಗೆ ಮಾಹಿತಿ ರವಾನಿಸಿರುವುದಾಗಿ ಹೇಳಿದರು.