ನ್ಯೂಸ್

ಮಾರುಕಟ್ಟೆಗೆ ನೂರಾರು ಹೊಸ ಟಮೋಟ ತಳಿಗಳು ಲಗ್ಗೆ/ ಗುಣಮಟ್ಟವಿಲ್ಲದ ಟಮೋಟ ಮಾರುಕಟ್ಟೆಗೆ/ಬೆಲೆ ಕುಸಿತ, ರ‍್ಯತ ಸಂಕಷ್ಟಕ್ಕೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಮುನಿವೆಂಕಟೇಗೌಡ ಎನ್.

ಹೊರ ರಾಜ್ಯಗಳು ಸೇರಿದಂತೆ ಹೊರದೇಶಗಳಿಗೆ ಬೇಡಿಕೆಯಂತೆ ಗುಣಮಟ್ಟದ ಟಮೋಟ ಬೆಳೆದುಕೊಡುತ್ತಿದ್ದ ಕೋಲಾರ ಜಿಲ್ಲೆಯ ಟಮೋಟ ಬೆಳೆಗಾರರು ಖಾಸಗಿ ಬಿತ್ತನೆ ಬೀಜ ಕಂಪನಿಗಳ ಪ್ರಯೋಗಗಳಿಗೆ ತುತ್ತಾಗಿ ೨೦೨೫ ರ ವರ್ಷ ಪೂರ್ತಿ ಬೆಲೆ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಏಷ್ಯಾದಲ್ಲಿಯೇ ಎರಡನೆ ಅತಿ ದೊಡ್ಡ ಟಮೋಟ ಮಾರುಕಟ್ಟೆ ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ದೇಶ, ವಿದೇಶಗಳ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಟಮೋಟ ಬೆಳೆದು ಸರಬರಾಜು ಮಾಡಿ ಕೋಲಾರ ರೈತರು ಸೈ ಎನಿಸಿಕೊಂಡಿದ್ದರು. ಸಾಹು ತಳಿಯ ನಾಟಿ ಟಮೋಟ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಬೆಳೆಯಲಾಗುತ್ತಿದ್ದು ಉತ್ತಮ ಇಳುವರಿ ಮತ್ತು ರಪ್ತಿಗೆ ಸೂಕ್ತವೆಂಬAತೆ ಗುಣಮಟ್ಟದ ಸಾಹು ಟಮೋಟ ಬೆಳೆಯಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಾಹು ತಳಿಯ ಟಮೋಟ ಹಲವು ಕಾಯಿಲೆಗಳಿಗೆ ತುತ್ತಾದ ಪರಿಣಾಮ ರೈತರು ಹೊಸ ತಳಿಗಳತ್ತ ಮುಖ ಮಾಡಿದ್ದಾರೆ.

ಸಾಹು ತಳಿ ವಿಫಲವಾದ ಬೆನ್ನಲ್ಲೇ ಮಾರುಕಟ್ಟೆಗೆ ನೂರಾರು ಹೊಸ ತಳಿಗಳು ಲಗ್ಗೆಯಿಟ್ಟವು. ಆದರೆ ಯಾವುದೇ ತಳಿಯು ರೈತರಿಗೆ ಅನುಕೂಲವಾಗುವಂತಹ ಫಸಲು ಬಿಡಲಿಲ್ಲ ಹಾಗು ರಪ್ತಿಗೆ ಸೂಕ್ತವೆಂಬAತಹ ಗುಣಮಟ್ಟದ ಬೆಳೆಯೂ ಬಾರದೆ ರೈತರು ಲಕ್ಷಾಂತರ ರೂ.ಗಳ ಬಂಡವಾಳ ಹೂಡಿ ಬೆಳೆ ಬೆಳೆದು ನಷ್ಟಕ್ಕೊಳಗಾಗುತ್ತಿದ್ದಾರೆ.

ಹೊಸ ಹೊಸ ತಳಿಗಳ ಟಮೋಟ ಮಾರುಕಟ್ಟೆಗೆ ಬರುತ್ತಿರುವುದರಿಂದ ರಫ್ತಿಗೆ ಸೂಕ್ತವಲ್ಲದ ಕಾರಣ ಕೇವಲ ಜ್ಯೂಸ್ ಪ್ಯಾಕ್ಟರಿಗಳಿಗೆ ಮಾತ್ರ ಖರೀದಿಸುತ್ತಿದ್ದು ಬಹುತೇಕ ರೈತರ ಟಮೋಟ ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ ರೈತರಿಗೆ ವಾಪಸ್ಸು ಕಳುಹಿಸಲಾಗುತ್ತಿದ್ದು ಇದರಿಂದ ರೈತರು ಬೆಳೆಗೆ ಹಾಕಿದ್ದ ಬಂಡವಾಳದ ಜೊತೆಗೆ ಕಾಯಿ ಕಿತ್ತ ಕೂಲಿ ಮತ್ತು ಮಾರುಕಟ್ಟೆಗೆ ಸಾಗಿಸಿದ ಬಾಡಿಗೆಯೂ ಕೈಯಿಂದ ಕೊಡಬೇಕಾದ ಪರಿಸ್ಥಿತಿ ಎದುರಾಗಿದ್ದು ಟಮೋಟ ಬೆಳೆಗಾರರಂತೂ ತೀವ್ರ ಸಂಕಷ್ಟಕ್ಕೆ ಸಿಲುಕಿಬಿಟ್ಟಿದ್ದಾರೆ.

ಕೋಟ್:

ಟಮೋಟಗೆ ವಿದೇಶಗಳಲ್ಲಿ ಈಗಲೂ ಹೆಚ್ಚಿನ ಬೇಡಿಕೆಯಿದ್ದು ಕೋಲಾರದಿಂದ ವಿದೇಶಗಳಿಗೆ ಸರಬರಾಜು ಮಾಡುವಂತಹ ಗುಣಮಟ್ಟದ ಕಾಯಿ ಮಾರುಕಟ್ಟೆಗೆ ಬಾರದ ಕಾರಣ ವ್ಯಾಪಾರಸ್ಥರು ಖರೀದಿಸಲು ಮುಂದಾಗುತ್ತಿಲ್ಲ, ಗುಣಮಟ್ಟದ ಟಮೋಟ ಬಂದರೆ ವ್ಯಾಪಾರಸ್ಥರು ರೈತರಿಗೆ ಉತ್ತಮ ಬೆಲೆ ಕೊಟ್ಟು ಖರೀದಿಸಲು ಸಿದ್ದರಿದ್ದು ಮಾರುಕಟ್ಟೆಗೆ ಗುಣಮಟ್ಟದ ಕಾಯಿ ಬಂದರೆ ಖಂಡಿತವಾಗಿ ರೈತರಿಗೆ ಅನುಕೂಲವಾಗುವ ಬೆಲೆಗೆ ಖರೀದಿಸಲಾಗುತ್ತಿದೆ.

-ಚಂದ್ರಾರೆಡ್ಡಿ, ಕೆ.ಎಂ.ಆರ್ ಮಂಡಿ ಮಾಲೀಕ.

ಈ ಮೊದಲು ಸಾಹು ತಳಿಯ ಟಮೋಟ ಬೆಳೆಯಲಾಗುತ್ತಿದ್ದು ಉತ್ತಮ ಫಸಲು ಮತ್ತು ಗುಣಮಟ್ಟದ ಕಾಯಿ ಸಿಗುತ್ತಿತ್ತು ಆದರೆ ಕಳೆದ ಎರಡು ವರ್ಷಗಳಿಂದ ಸಾಹು ಟಮೋಟಗೆ ವೈರಸ್ ರೋಗ ಹರಡುತ್ತಿದ್ದು ಬೆಳೆ ಆಗುತ್ತಿಲ್ಲ. ಆದ್ದರಿಂದ ಬೇರೆ ತಳಿಗಳ ಟಮೋಟ ಬೆಳೆಯಲು ಮುಂದಾಗಿ ಯಾವುದೇ ತಳಿ ಫಲ ನೀಡುತ್ತಿಲ್ಲ, ಕೆಲವು ತಳಿಗಳು ಉತ್ತಮ ಬೆಳೆ ಬಂದರೆ ಆ ಕಾಯಿಗಳು ಮಾರುಕಟ್ಟೆಯಲ್ಲಿ ಗುಣಮಟ್ಟವಿಲ್ಲದೆ ವ್ಯಾಪಾರ ಆಗದೆ ವಾಪಸ್ಸು ಕಳುಹಿಸಲಾಗುತ್ತಿದೆ. ಸಾಹು ತಳಿಯ ಟಮೋಟಗೆ ಈಗಲೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು ಗುಣಮಟ್ಟದ ಟಮೋಟ ಪ್ರತಿ ಬಾಕ್ಸ್ ೪೦೦-೫೦೦ ರೂ.ಗಳಿಗೆ ಮಾರಾಟವಾಗುತ್ತಿದ್ದರೆ. ಹೊಸ ತಳಿಗಳ ಕಾಯಿ ಪ್ರತಿ ಬಾಕ್ಸ್ ೫೦ ರಿಂದ ೩೦೦ ರೂ.ಗಳಿಗೆ ಮಾರಾಟವಾಗುತ್ತಿವೆ, ಇನ್ನೂ ಕೆಲವು ತಳಿಗಳು ಮಾರಾಟವಾಗದೆ ವಾಪಸ್ಸು ಕಳುಹಿಸಲಾಗುತ್ತಿದೆ. ೨೦೨೫ ನೇ ವರ್ಷದ ಜನವರಿ ತಿಂಗಳಿನಿAದ ಈವರೆವಿಗೂ ಟಮೋಟಗೆ ಬೆಲೆ ಇಲ್ಲದೆ ಲಕ್ಷಾಂತರ ರೈತರು ಸಾಲಗಾರರಾಗಿ ಊರು ಬಿಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

-ಶ್ರೀನಾಥ್ ರೆಡ್ಡಿ, ಟಮೋಟ ಬೆಳೆಗಾರ, ಸೋಮಯಾಜಲಹಳ್ಳಿ.

ಚಿತ್ರ ೦೬ ಕೆ.ಎಲ್.ಆರ್. ೦೧ ಗುಣಮಟ್ಟವಿಲ್ಲದ ಟಮೋಟ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದು.

ಚಿತ್ರ ೦೬ ಕೆ.ಎಲ್.ಆರ್. ೦೧ಅ ಖಾಸಗಿ ಬಿತ್ತನೆ ಬೀಜ ಕಂಪನಿಗಳ ಪ್ರಯೋಗಗಳಿಗೆ ತುತ್ತಾಗಿ ವ್ಯೆರಸ್ ರೂಗಕ್ಕೆ ತುತ್ತಾಗಿರುವ ಟಮೋಟ ಸಸಿಗಳು.

ಚಿತ್ರ ೦೬ ಕೆ.ಎಲ್.ಆರ್. ೦೧ಬಿ ಚಂದ್ರಾರೆಡ್ಡಿ, ಕೆ.ಎಂ.ಆರ್ ಮಂಡಿ ಮಾಲೀಕ

ಚಿತ್ರ ೦೬ ಕೆ.ಎಲ್.ಆರ್. ೦೧ಸಿ -ಶ್ರೀನಾಥ್ ರೆಡ್ಡಿ, ಟಮೋಟ ಬೆಳೆಗಾರ, ,

-