ರಾಯಚೂರು
ಅಪಘಾತದಲ್ಲಿ ವೃದ್ಧರನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾನವೀಯತೆ ಮೆರೆದಿದ್ದಾರೆ.
ರಾಯಚೂರಿನ ಹೊರವಲಯದ ಸಾಥ್ ಮೈಲ್ ಬಳಿ ಕಾರು ಪಲ್ಟಿಯಾಗಿ ಗಾಯಗೊಂಡಿದ್ದ ವೃದ್ಧ ದಂಪತಿಗಳನ್ನು ಎಸ್ಪಿ ತಮ್ಮ ಕಾರ್‌ನಲ್ಲಿ ಕರೆದು ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಮಲ್ಲಾಪುರ ಗ್ರಾಮದ ಹನುಮಯ್ಯ, ಶರಣಮ್ಮ ದಂಪತಿ ಹಾಗೂ ಕಾರು ಚಾಲಕ ತಿರುಪತಿಗೆ ಗಾಯಗೊಂಡವರು.
ದೇವದುರ್ಗದ ಸುಲ್ತಾನಪುರದಿಂದ ರಾಯಚೂರಿಗೆ ಹೊರಟಿದ್ದವರ ಕಾರು
ಅಪಘಾತ ತಪ್ಪಿಸಲು ಹೋಗಿ ಪಲ್ಟಿ ಹೊಡೆದು ಜಮೀನಿಗೆ ಬಿದ್ದಿದೆ.
ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.