ವಿಜಯವಾಣಿ ಸುದ್ದಿಜಾಲ ಕೋಲಾರ
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಜ.೩೦ ರಂದು ಜಿಲ್ಲೆಗೆ ಭೇಟಿ ನೀಡಿ, ವಿವಿಧ ಸಂಸ್ಥೆಗಳನ್ನು ಪರಿಶೀಲನೆ ನಡೆಸಿ ಸೂಚಿಸಲಾದ ಸಲಹೆ, ಪರಿಹಾರ ಕ್ರಮಗಳನ್ನು ತಕ್ಷಣವೇ ಅಳವಡಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ತಿಳಿಸಿದರು.
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಈ ಹಿಂದೆ ಭೇಟಿ ನೀಡಲಾದ ಸಂಸ್ಥೆಗಳಿಗೆ ಶನಿವಾರ ಎ.ಸಿ.ಡಾ.ಮೈತ್ರಿ ರವರು ಮರು ಭೇಟಿ ನೀಡಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ನೀಡಿರುವ ಸೂಚನೆಗಳಿಗೆ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆಯೇ ಹಾಗೂ ಗಮನಿಸಲಾದ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆಯೇ ಎಂಬ ಬಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಎಸ್ ಎನ್ ಆರ್ ಆಸ್ಪತ್ರೆಗೆ ಭೇಟಿನೀಡಿದ ಅವರು ಆಯೋಗವು ಸೂಚಿಸಲಾದ ಸಲಹೆಗಳಾದ ಒತ್ತಡ ಹೆಚ್ಚಿರುವ ಓ ಪಿ ಡಿ ಕೌಂಟರ್ ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಡಯಾಲಸಿಸ್ ಗಾಗಿ ಬರುವ ರೂಗಿಗಳಗೆ ಈಗಿರುವ ಒಮ್ಮುಖ ದಾರಿಯನ್ನು ತೆರವುಗೊಳಿಸಿ ದ್ವಿಮುಖ ದಾರಿ ವ್ಯವಸ್ಥೆ ಮಾಡಲು ಸೂಚಿಸಿದರು. ಅದರಂತೆ ಎಸ್.ಎನ್.ಆರ್.ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಒಪಿಡಿ ಕೌಂಟರ್ ಮತ್ತು ದ್ವಿಮುಖ ದಾರಿ ವ್ಯವಸ್ಥೆ ಮಾಡಿರುವುನ್ನು ಡಾ.ಮೈತ್ರಿ ಭೇಟಿ ನೀಡಿ ವೀಕ್ಷಿಸಿದರು.
ಬಾಲಕರ ಹಾಸ್ಟೆಲ್ ಗೆ ಭೇಟಿ ನೀಡಿದಾಗ ಸೂಕ್ತ ಬಿಸಿನೀರಿನ ವ್ಯವಸ್ಥೆಗಾಗಿ ಕೂಡಲೇ ಗೀಸರ್ ಒಂದನ್ನು ಖಾರೀದಿಸಿ ಅಳವಡಿಸಲು ತಕ್ಷವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಸ್ ನಿಲ್ದಾಣದಲ್ಲಿ ಲೇಬಲ್ ಇಲ್ಲದೆ ಮಾರಾಟ ಮಾಡಲಾಗುತ್ತಿದ್ದ ಆಹಾರ ಪದಾರ್ಥಗಳನ್ನು ತಕ್ಷಣವೇ ವಶಕ್ಕೆ ಪಡೆದು ಅಂತಹ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿದರು.
ಆವರಣವನ್ನು ಸ್ವಚ್ಛವಾಗಿರಿಸಿಕೊಳ್ಳಲು ಸೂಚಿಸಿದರಲ್ಲದೆ ಎಲ್ಲಾ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ತಂಪು ಪಾನಿಯಗಳ ಎಕ್ಸೆöÊಪಿ ದಿನಾಂಕಗಳನ್ನು ಪರಿಶೀಲನೆ ನಡೆಸಿದರು. ನಿಗಧಿತ ಧರಕ್ಕಿಂತ ಹೆಚ್ಚು ಮೊತ್ತ ಪಡೆಯುವ ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸಲು ಸೂಚಿಸಿದರು.
ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು, ಕ ರಾ ರ ಸಾ ನಿಗಮದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಇದ್ದರು.
ಚಿತ್ರ ೦೨ ಕೆ.ಎಲ್.ಆರ್. ೦೩ : ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಬಸ್ ನಿಲ್ದಾಣ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಮೇಲಿನ ಎಕ್ಸೆ÷್ಪöÊರಿ ದಿನಾಂಕಗಳನ್ನು ಪರಿಶೀಲಿಸಿದರು.