ಸರಗೂರು: ಹಿಂದುಳಿದ ತಾಲೂಕು ಎಂಬ ಕಳಂಕ ಹೊಂದಿರುವ ಎಚ್.ಡಿ. ಕೋಟೆ ಕ್ಷೇತ್ರವನ್ನು ಮಾದರಿ ತಾಲೂಕು ಮಾಡಲು ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಚಕ್ಕೂರು, ಕೆ.ಬೆಳ್ತೂರು, ಅಡ್ಡಹಳ್ಳಿ, ಹುಣಸಹಳ್ಳಿ, ಚಂಗೌಡನಹಳ್ಳಿ, ಬಡಗಲಪುರ ಗ್ರಾಮದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಶಾಸಕನಾಗಿ ನಾಲ್ಕೂವರೆ ವರ್ಷ ಪೂರೈಸಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ನಿರುದ್ಯೋಗ ನಿವಾರಣೆ, ಆರೋಗ್ಯ, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಮಾದರಿ ತಾಲೂಕು ಮಾಡಲು ಕೆಲಸ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಬಳಸುತ್ತಿದ್ದೇನೆ ಎಂದರು.
ಕೆ.ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳಿಗೆ 7.50 ಕೋಟಿ ರೂ. ಅನುದಾನ ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಶೇ.90 ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೂ ಅನುದಾನ ತರುತ್ತಿದ್ದೇನೆ ಎಂದರು.
ಜಿಪಂ ಮಾಜಿ ಸದಸ್ಯ ಪಿ.ರವಿ, ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಅಡ್ಡಹಳ್ಳಿ ಶೀಲಾ ಮಹದೇವು, ಉಪಾಧ್ಯಕ್ಷೆ ಮಂಜುಳಾ ಅಂಕನಾಯಕ, ಹೂವಿನಕೊಳ ಮಹೇಶ್, ಜಿಪಂ ಮಾಜಿ ಸದಸ್ಯ ಕೆ.ಚಿಕ್ಕವೀರನಾಯಕ, ಕಾಂಗ್ರೆಸ್ ಮುಖಂಡ ಸತೀಶ್‌ಗೌಡ, ಇಂಜಿನಿಯರ್‌ಗಳಾದ ಬೋರಯ್ಯ, ಹರೀಶ್, ರಘು, ಮೋಹನಾಶ್ರೀ, ಯೋಗೀಶ್, ಲಕ್ಷ್ಮೀಕಾಂತ, ಬಿಇಒ ಉದಯ್‌ಕುಮಾರ್, ಸಿಆರ್‌ಪಿ ಆರ್. ಆಶಾ, ಪಂಚಾಯಿತಿ ಸದಸ್ಯರಾದ ರುದ್ರಯ್ಯ, ರವಿನಂದನ್, ಚಿಕ್ಕಕಾಳನಾಯಕ, ಭರತ್, ಅಡ್ಡಹಳ್ಳಿ ಮಂಜು, ಪಿಡಿಒ ನಾಗರಾಜು, ಶಶಿ ಪಾಟೀಲ್, ಪರಶಿವ, ಚಲುವ, ಹುಚಯ್ಯ, ಯಶ್ವಂತ್ ಹಾಜರಿದ್ದರು.