ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಾದಕ ವಸ್ತುಗಳ ನಿಯಂತ್ರಣ ಅಧಿಕಾರಿ ಎಸ್.ವಿ.ವೀರೇಶ್ ಮಾತನಾಡಿದರು. 
ನ್ಯೂಸ್

ಮಾದಕ ವಸ್ತು ನಿಯಂತ್ರಣಕ್ಕೆ ಗಂಭೀರ ಚಿಂತನೆ ನಡೆಸಿ

ತೀರ್ಥಹಳ್ಳಿ: ಇತ್ತೀಚಿನ ದಿನಗಳಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ದಂಧೆ ವ್ಯಾಪಿಸುತ್ತಿದೆ. ವ್ಯಸನಗಳಿಗೆ ಯುವಜನರೇ ಹೆಚ್ಚಿನ ಸಂಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ ಎಂದು ಎಂದು ಜಿಲ್ಲಾ ಮಾದಕ ವಸ್ತುಗಳ ನಿಯಂತ್ರಣ ಅಧಿಕಾರಿ ಎಸ್.ವಿ.ವೀರೇಶ್ ಕಳವಳ ವ್ಯಕ್ತಪಡಿಸಿದರು.

ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಮಂಗಳವಾರ ಕಾಲೇಜಿನ ಐಕ್ಯೂಎಸಿ, ವುಮೆನ್ ಎಂಪವರ್‌ಮೆಂಟ್ ಸೆಲ್‌ನಿಂದ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆಯಿಂದಾಗುವ ಪರಿಣಾಮ ಹಾಗೂ ಮಹಿಳಾ ದೌರ್ಜನ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರ ಆರೋಗ್ಯ ಸಂಪನ್ಮೂಲ ಅಧಿಕಾರಿ ಜಯಶ್ರೀ ಮಾತನಾಡಿ, ಪ್ರಸ್ತುತ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಣ್ಣು ಮಕ್ಕಳು ಜಾಗ್ರತೆ ವಹಿಸುವ ಅಗತ್ಯವಿದೆ. ಮುಖ್ಯವಾಗಿ ಸಾಮಾಜಿಕ ಜಾಲತಾಣ ಮುಂತಾದ ಮಾಧ್ಯಮಗಳಲ್ಲಿ ಯಾರೊಂದಿಗೂ ಸಲುಗೆಯಿಂದ ವರ್ತಿಸದೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ ಮಾತನಾಡಿ, ಕೋಟ್ಪಾದಡಿ ಮಾದಕ ವಸ್ತುಗಳ ವ್ಯಾಪಾರ ನಿಯಂತ್ರಿಸಲು ಸಂಬಂಧಿಸಿದ ಇಲಾಖೆ ಔಪಚಾರಿಕವಾಗಿ ಕಾರ್ಯನಿರ್ವಹಿಸದೆ ಬಿಗಿಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಜನ್ಮದಿನ ಆಚರಣೆ ಮಾಡಿಕೊಳ್ಳುವ ಮೋಜಿನಲ್ಲಿ ನದಿ ದಡದಲ್ಲಿ ಗಾಂಜಾ, ಮದ್ಯ ಸೇವನೆಯಿಂದಾಗಿ ಯುವಜನರು ನೀರು ಪಾಲಾದ ದುರ್ಘಟನೆಗಳೂ ನಮ್ಮ ಕಣ್ಣ ಮುಂದಿವೆ ಎಂದು ಹೇಳಿದರು.

ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ, ಜೆಸಿ ಆಸ್ಪತ್ರೆ ವೈದಾಧಿಕಾರಿಗಳಾದ ಡಾ. ಗಣೇಶ್ ಭಟ್, ಪ್ರಭಾಕರ ಪೂಜಾರಿ, ಪಿಯು ಕಾಲೇಜಿನ ಪ್ರಾಚಾರ್ಯ ಕೆ.ಎಲ್.ಪ್ರಸನ್ನ, ವುಮೆನ್ ಎಂಪವರ್‌ಮೆಂಟ್ ಸೆಲ್ ಸಂಚಾಲಕಿ ಡಾ. ವಿಮಲಾ, ಎನ್‌ಎಸ್‌ಎಸ್ ಘಟಕಾಧಿಕಾರಿ ಬಿ.ಸಿ.ಮೋಹನ್ ಇದ್ದರು.