ನ್ಯೂಸ್

ಮಾದಕ ದ್ರವ್ಯಗಳ ನಿಯಂತ್ರಣ ಎಲ್ಲರ ಜವಾಬ್ದಾರಿ

ಬೀರೂರು: ಸಮಾಜಕ್ಕೆ ಮಾರಕವಾಗಿರುವ ಮಾದಕ ದ್ರವ್ಯಗಳ ಸೇವನೆ, ಮಾರಾಟದ ವಿರುದ್ಧ ಯುದ್ಧದ ಮಾದರಿಯಲ್ಲಿ ಹೋರಾಟ ಮಾಡಬೇಕಾಗಿದೆ. ಮಾದಕ ದ್ರವ್ಯಗಳನ್ನು ನಿಯಂತ್ರಿಸುವಲ್ಲಿ ನಾಗರಿಕರ ಜವಾಬ್ದಾರಿಯೂ ಇದೆ ಎಂದು ರೈಲ್ವೆ ಪೊಲೀಸ್ ಠಾಣೆ ಎಎಸ್‌ಐ ನವೀನ್ ಕುಮಾರ್ ತಿಳಿಸಿದರು.

ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಗಮ್ಮತ್ತು ಜೀವಕ್ಕೆ ಆಪತ್ತು ಎಂಬ ಸಂದೇಶದಲ್ಲಿ ಮಾದಕ ದ್ರವ್ಯಗಳ ದಾಸರಾಗದಂತೆ ಹಾಗೂ ರಾಜ್ಯವನ್ನು ನಶಾಮುಕ್ತ ಕರ್ನಾಟಕ ಮಾಡುವಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಪ್ರಸ್ತುತ ಹಲವರು ಧೂಮಪಾನ, ಮದ್ಯಪಾನ, ಗುಟ್ಖಾ, ತಂಬಾಕು ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂಥ ಚಟಗಳಿಂದ ಸಂಸಾರಿಕವಾಗಿಯೂ ಸಮಸ್ಯೆಗಳು ಎದುರಾಗುತ್ತವೆ. ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಮಾದಕ ದ್ರವ್ಯಗಳ ದುಶ್ಚಟಗಳಿಂದ ದೂರವಿರಬೇಕು ಎಂದರು. ಅಭಿಯಾನದಲ್ಲಿ ರೈಲ್ವೆ ಪೊಲೀಸ್ ಸಿಬ್ಬಂದಿ ಎಚ್.ಸಿ.ಪ್ರದೀಪ್ ಕುಮಾರ್, ಮಮತಾ ಮತ್ತು ಪ್ರಯಾಣಿಕರು ಇದ್ದರು.