ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ದೇಗುಲದಲ್ಲಿ ಪ್ರತಿಷ್ಠಾಪಿಸಿರುವ ಸ್ವರ್ಣಗೌರಿ. 
ನ್ಯೂಸ್

ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ಪ್ರತಿಸ್ಥಾಪನೆ

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ದೇವಿ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರ ನೂರಾರು ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು.

ಹುಣ್ಣಿಮೆ ದಿನದಂದು ಮತ್ತಿಗೆ ಮಣ್ಣಿನಿಂದ ತಯಾರಿಸಿದ್ದ ದೇವಿಯ ಮೂರ್ತಿಗೆ ಮುತ್ತೈದೆಯರು ಧಾರ್ಮಿಕ ವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಜಯಘೋಷದ ನಡುವೆ ಮಹಾಮಂಗಳಾರತಿ ನೆರವೇರಿಸಿ ಪ್ರತಿಷ್ಠಾನೆ ಮಾಡಲಾಯಿತು. ಡಿ.ಎಂ.ಕುರ್ಕೆ, ಕಿತ್ತನಕೆರೆ, ಕಡಲಮಗ್ಗೆ, ಕೆ.ಶಂಕರನಹಳ್ಳಿ, ದಿಬ್ಬೂರು, ಶಶಿವಾಳ, ಪಿ.ಹೊಸಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದರು.