ನ್ಯೂಸ್

ಮಾ.12ರಂದು ಶಿವಕುಮಾರಸ್ವಾಮೀಜಿ ಪುಣ್ಯ ಸ್ಮರಣೆ

ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಮಾ.12ರಂದು ಹನೂರಿನ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ತಿಳಿಸಿದರು.

ಕಾರ್ಯಕ್ರಮವು ಪಕ್ಷಾತೀತ ಹಾಗೂ ಜಾತ್ಯತೀತ ವಾಗಿದ್ದು, ಸುಮಾರು 8ರಿಂದ 10 ಸಾವಿರ ಜನ ಸಮೂಹ ಸೇರಲಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರು ಸಿದ್ದಲಿಂಗ ಮಹಾಸ್ವಾಮಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹನೂರು ಘಟಕದ ಅಧ್ಯಕ್ಷ ಬಸವರಾಜಪ್ಪ ಕಣ್ಣೂರು, ಪ್ರಧಾನ ಕಾರ್ಯದರ್ಶಿ ವಿ.ಶಿವಕುಮಾರ್ ಬಂಡಳ್ಳಿ, ಕಾರ್ಯಕ್ರಮ ಆಯೋಜಕ ಆನಾಪುರ. ಮಹೇಶ್, ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ಉದ್ಧನೂರು ಪ್ರಸಾದ್ ಇದ್ದರು