ಬೆಂಗಳೂರು: ಕುಡಿಯಲು ನೀರು ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ ುಡ್ ಡೆಲವರಿ ಬಾಯ್‌ನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲೂಕಿನ ಆಕಾಶ್(೨೭) ಬಂಧಿತ.
ುಡ್ ಡೆಲವರಿ ಮಾಡುವ ವೇಳೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ. ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ನಗರದ ಕುಂದನಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ವಾಸವಾಗಿದ್ದುಕೊಂಡು ರ‌್ಯಾಪಿಡೋ ಹಾಗೂ ಇತರೆ ಕಂಪನಿಯ ುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮಾ. ೧೭ ರಂದು ಸಂಜೆ ಆನ್‌ಲೈನ್‌ನಲ್ಲಿ ಸ್ವಿಗ್ಗಿಯಲ್ಲಿ ಎಇಸಿಎಸ್ ಲೇಔಟ್‌ನ ೩೦ ವರ್ಷದ ಮಹಿಳೆ ುಡ್ ಆರ್ಡರ್ ಮಾಡಿದ್ದಾರೆ. ಸಂಜೆ ೬.೩೦ ರ ವೇಳೆ ಡೆಲವರಿ ಬಾಯ್ ಆಕಾಶ್ ುಡ್ ಡೆಲವರಿ ಕೊಡಲು ಮಹಿಳೆ ಮನೆಗೆ ಹೋಗಿದ್ದಾನೆ. ುಡ್ ತೆಗೆದುಕೊಳ್ಳಲು ಬಂದ ಮಹಿಳೆಗೆ ವಾಶ್‌ರೂಂಗೆ ಹೋಗಬೇಕು ಎಂದು ಕೇಳಿ ಮನೆಯೊಳಗೆ ಹೋಗಿ ವಾಶ್ ರೂಮ್ ಬಳಸಿದ್ದಾನೆ. ನಂತರ ಹೊರ ಬಂದು ಬಾಯಾರಿಕೆಯಾಗುತ್ತಿದೆ, ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾನೆ. ಆಗ ಮಹಿಳೆ ನೀರು ತರಲು ಅಡುಗೆ ಕೊಣೆಗೆ ಹೋಗುತ್ತಿದ್ದಂತೆ ಆಕಾಶ್ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡು ಡೆಲವರಿ ಬಾಯ್ ಆಕಾಶ್ ಕೆನ್ನೆಗೆ ಹೊಡೆದಾಗ ಆತ ಅಲ್ಲಿಂದ ಓಡಿ ಹೋಗಿದ್ದಾನೆ. ಈ ಬಗ್ಗೆ ಮಹಿಳೆ ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾಗಿದ್ದ ಆರೋಪಿ ಆಕಾಶ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.