ಬಾಳೆಹೊನ್ನೂರಿನ ದಿವ್ಯ ಭಾರತಿ ಮಹಿಳಾ ಮಂಡಳಿ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಜ್ಯೋತಿ ಮೂರ್ತಿ, ವಿದ್ಯಾ ಆರ್.ಪೈ, ಬಿ.ಸಿ.ಗೀತಾ ಇತರರಿದ್ದರು 
ನ್ಯೂಸ್

ಮಹಿಳೆಯರು ಮುಖ್ಯವಾಹಿನಿಗೆ ಬರಲಿ

ಬಾಳೆಹೊನ್ನೂರು: ಪಟ್ಟಣದ ದಿವ್ಯಭಾರತಿ ಮಹಿಳಾ ಮಂಡಳಿ ಮಹಿಳೆಯರಿಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.

ಪಟ್ಟಣದ ದಿವ್ಯಭಾರತಿ ಮಹಿಳಾ ಮಂಡಳಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸಭೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳಾ ಮಂಡಳಿಯು ಮಹಿಳೆಯರು ಸಮಾಜದಲ್ಲಿ ಮುಂಚೂಣಿಯಲ್ಲಿ ಬರಲು ಅವಕಾಶ ಕಲ್ಪಿಸಿದೆ. ಸ್ತ್ರೀಯರು ಸಬಲರಾಗಲು ಇಂತಹ ಸಂಘ ಸಂಸ್ಥೆಗಳು, ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಮೂರ್ತಿ ಮಾತನಾಡಿ, ಸದಸ್ಯರೆಲ್ಲರ ಸಹಕಾರದಿಂದ ಒಂದು ವರ್ಷದ ಅಧ್ಯಕ್ಷ ಅವಧಿಯನ್ನು ಉತ್ತಮವಾಗಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದರು. ಸದಸ್ಯರಿಗಾಗಿ ನಡೆದ ಜಾನಪದ ಗೀತೆ ಸ್ಪರ್ಧೆಯಲ್ಲಿ ಬಿ.ಸಿ.ಗೀತಾ ಪ್ರಥಮ, ಶಬ್ರಿನ್ ತಾಜ್ ದ್ವಿತೀಯ ಸ್ಥಾನ ಪಡೆದರು. ಮಹಿಳಾ ಮಂಡಳಿ ಕಾರ್ಯದರ್ಶಿ ವಿದ್ಯಾ ಆರ್. ಪೈ ಮತ್ತಿತರರಿದ್ದರು.