ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ 2025ರ ದಸರಾ ವಸ್ತುಪ್ರದರ್ಶನವನ್ನು ಸೆಪ್ಟೆಂಬರ್ 22 ರಿಂದ ಡಿಸೆಂಬರ್ 21 ರವರೆಗೆ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.
ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರು/ ಪ್ರವಾಸಿಗರು ವೀಕ್ಷಿಸುವ ಸಲುವಾಗಿ ಲಲಿತಕಲಾ ಮತ್ತು ಕರಕುಶಲ ಹಾಗೂ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಕಲಾವಿದರುಗಳು ಏಪ್ರಿಲ್ -2025 ರ ನಂತರ ಅಂದವಾಗಿ ರಚಿಸಿದ ಕಲಾಕೃತಿಗಳನ್ನು ಹಾಗೂ ಮಹಿಳೆಯರು ಮತ್ತು ಮಕ್ಕಳು ಮನೆಯಲ್ಲಿಯೇ ತಯಾರಿಸಿದ ಕಲಾಕೃತಿಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. 10-09-2025 ರಿಂದ 18-09-2025 ಪ್ರಾಧಿಕಾರದ (ಮಹಿಳಾ ಮತ್ತು ಮಕ್ಕಳ ವಿಭಾಗ ಹಾಗೂ ಲಲಿತಕಲಾ ಮತ್ತು ಕರಕುಶಲ ವಿಭಾಗಗಳಲ್ಲಿ) ಕಛೇರಿ ವೇಳೆಯಲ್ಲಿ ಕಲಾಕೃತಿಗಳನ್ನು ನೀಡಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ ಹಾಗೂ ಕಛೇರಿಯ ವ್ಯವಸ್ಥಾಪಕರಾದ ಬಿ.ಆರ್ ನಂದಕುಮಾರ್, ಮೊ ಸಂ:7204202444 ಮತ್ತು ದ್ವಿತೀಯ ದರ್ಜೆ ಸಹಾಯಕರಾದ ಶ್ರೀನಿಧಿ ಕೆ.ಟಿ., ಮೊ. ಸಂ.8431517909 ರವರುಗಳನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.