ಎನ್.ಆರ್.ಪುರ ತಾಲೂಕು ದ್ವಾರಮಕ್ಕಿಯ ರಾಮನಾಥೇಶ್ವರ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿದರು. ಉಷಾ, ಯಶೋದಾ, ಕವಿತಾ, ರಮಾ, ಸುಪ್ರಿತಾ ಇದ್ದರು. 
ನ್ಯೂಸ್

ಮಹಿಳೆಯರು ಕುಟುಂಬ ಒಗ್ಗೂಡಿಸಲಿ

ಎನ್.ಆರ್.ಪುರ: ಹಬ್ಬ, ಹರಿದಿನಗಳಲ್ಲಿ ಮಹಿಳೆಯರು ಕುಟುಂಬದವರನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು ಎಂದು ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಸಲಹೆ ನೀಡಿದರು.

ದ್ವಾರಮಕ್ಕಿಯ ರಾಮನಾಥೇಶ್ವರ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಸಿಕ ಸಭೆಯಲ್ಲಿ ಮಹಿಳೆಯರ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿ, ಮಹಿಳೆಯರು ಕುಟುಂಬವನ್ನು ಮುನ್ನಡೆಸುವಾಗ ಆದಾಯ ನೋಡಿಕೊಂಡು ಖರ್ಚು ಮಾಡಬೇಕಾಗುತ್ತದೆ. ಮಹಿಳೆಯರು ಸಂಘ, ಸಂಸ್ಥೆಗಳಲ್ಲಿ ಭಾಗವಹಿಸಿದರೆ ವ್ಯವಹಾರ ಜ್ಞಾನ ಬೆಳೆಯುತ್ತದೆ ಎಂದು ತಿಳಿಸಿದರು.

ಮಹಿಳಾ ಜ್ಞಾನ ವಿಕಾಸ ಕೇಂದ್ರದ ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಸಮನ್ವಯಾಧಿಕಾರಿ ಉಷಾ ಮಾತನಾಡಿ, ಪ್ರತಿಯೊಬ್ಬ ಸದಸ್ಯರೂ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆಗೆ ತಪ್ಪದೆ ಹಾಜರಾಗಬೇಕು ಎಂದರು.

ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಮನಾಥೇಶ್ವರ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಕವಿತಾ, ಸೇವಾ ಪ್ರತಿನಿಧಿ ರಮಾ, ಸುಪ್ರಿತಾ, ಸಿತಾರ, ಸ್ವಸಹಾಯ ಸಂಘದ ಸದಸ್ಯರು ಇದ್ದರು.