ಅರಕಲಗೂಡು: ಪಟ್ಟಣದ ಕನ್ನಿಕಾ ಮಹಲ್‌ನಲ್ಲಿ ವಾಸವಿ ಕ್ಲಬ್, ವಾಸವಿ ವನಿತಾ ಕ್ಲಬ್, ವಾಸವಿ ವನಿತಾ ಸಂಘ, ಆರ್ಯ ವೈಶ್ಯ ಮಂಡಳಿ, ಪ್ರಸನ್ನ ನಂಜುಂಡೇಶ್ವರ, ಕನ್ನಿಕಾ ಪರಮೇಶ್ವರಿ ದೇವಾಲಯ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಗಜಗೌರಿ ವ್ರತ ಮತ್ತು ಗೋದಾನ ಕಾರ್ಯಕ್ರಮ ಭಾನುವಾರ ಜರುಗಿತು.
ಕಾರ್ಯಕ್ರಮದಲ್ಲಿ 40 ಜನ ಮಹಿಳೆಯರು ಗಜಗೌರಿ ವ್ರತ ನಡೆಸಿದರು. ಬಳಿಕ ಹೋಮ, ಪೂರ್ಣಾಹುತಿ, ಗೋ ಪೂಜೆ ಮತ್ತು ಗೋದಾನ, ದಾನಿಗಳಿಗೆ ಗೌರವ ಸಮರ್ಪಣೆ ನಡೆಯಿತು. ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು. ಹೊಳೆನರಸೀಪುರ ವಾಸವಿ ದೇವಾಲಯದ ಲೋಕೇಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು.
ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಪಿ.ಎನ್ ರಂಗನಾಥ್, ಕನ್ನಿಕಾ ಮಹಲ್ ಸಮಿತಿ ಅಧ್ಯಕ್ಷ ಎ.ಎಸ್. ವೆಂಕಟೇಶ್ ಶೆಟ್ಟಿ, ಕನ್ನಿಕಾ ಪರಮೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಎ.ಜಿ.ರಾಮನಾಥ್, ವಾಸವಿ ಕ್ಲಬ್ ಅಧ್ಯಕ್ಷ ರಾಜೇಂದ್ರ ಕುಮಾರ್, ವಾಸವಿ ವನಿತಾ ಕ್ಲಬ್ ಮತ್ತು ವಾಸವಿ ವನಿತಾ ಸಂಘದ ಅಧ್ಯಕ್ಷೆ ರೇಖಾ ರಾಜೇಂದ್ರ, ವಾಸವಿ ವನಿತಾ ಕ್ಲಬ್ ಕಾರ್ಯದರ್ಶಿ ಗಾಯತ್ರಿ ಗಿರಿ, ವಾಸವಿ ವನಿತಾ ಸಂಘದ ಕಾರ್ಯದರ್ಶಿ ಲಕ್ಷ್ಮೀ ಶಿವು, ನಿರ್ದೇಶಕಿ ಅನ್ನಪೂರ್ಣ, ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಶ್ರೀಧರ್, ಲಕ್ಷ್ಮೀ ಪ್ರಕಾಶ್, ಸಂಧ್ಯಾ ಶ್ರೀನಿವಾಸ್, ಆನಂದ್, ಕಿರಣ್, ಎ.ಎಸ್. ಗೌತಮ್ ಇತರರಿದ್ದರು.