ನ್ಯೂಸ್

ಮಳೆಯಬ್ಬರ ಬಿದ್ದ ಮನೆಗಳ ಮಾಲೀಕರಿಗೆ ತಕ್ಷಣ ಪರಿಹಾರ ನೀಡಲು ಡಿಸಿ ತರನ್ನುಮ್ ಸೂಚನೆ

ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ಪರಿಶೀಲನೆ
ಅಂಗನವಾಡಿ ಕೇಂದ್ರ ದುರಸ್ತಿಗೆ ಸೂಚನೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶನಿವಾರ ಅಫಜಲಪುರ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದಾದ ಹಾನಿ ಪರಿಶೀಲಿಸಿದರು. ಅಲ್ಲದೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೆಲವು ಸೂಚನೆ ನೀಡಿದರು.
ಚವಡಾಪುರ ಗ್ರಾಮಕ್ಕೆ ಆಗಮಿಸಿದ್ದ ಅವರು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮೇಲ್ಛಾವಣಿ ಮಳೆಯಿಂದ ಸೋರುತ್ತಿದ್ದನ್ನು ನೋಡಿದ ತP್ಷÀಣ ಕಟ್ಟಡ ಸೇರಿದಂತೆ ತಾಲೂಕಿನಲ್ಲಿ ಸೋರುತ್ತಿರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ತP್ಷÀಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಿಡಿಪಿಒ ಪ್ರೇಮಾ ಅವರಿಗೆ ಸೂಚಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ  ಶೌಚಾಲಯ ವ್ಯವಸ್ಥೆಯನ್ನು ದುರಸ್ತಿ ಮಾಡುವಂತೆ ತಾಪಂ ಇಒ ಹಾಗೂ ಪಿಡಿಒಗೆ ತಿಳಿಸಿದರು.
ಇಂಚಗೇರಾ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದರು. ಬಿದ್ದ ಮನೆಗಳ ಮಾಲೀಕರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ  ಕೂಡಲೇ ಪರಿಹಾರ ನೀಡುವಂತೆ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರಿಗೆ ನಿರ್ದೇಶನ ನೀಡಿದರು. ಅಲ್ಲದೆ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ, ಇತ್ಯಾದಿ ಗ್ರಾಮದ ಮೂಲಸೌಕರ್ಯಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ತಾಪಂ ಇಒ ವಿಜಯ ಮಹಾಂತೇಶರಿಗೆ ಸೂಚಿಸಿದರು.
 ಅತನೂರ ಗ್ರಾಮದ ನಾಡ ಕಚೇರಿಗೆ ಭೇಟಿದರು. ಕಟ್ಟಡ ಹಳೆಯದಾಗಿದ್ದರಿಂದ ಹೊಸ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು.
ಕೋಣೆ ಬದಲಾಯಿಸುವಂತೆ ಸೂಚನೆ
ಘತ್ತರಗಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿ¯್ಲÁಧಿಕಾರಿಗಳು, ಮಳೆಯಿಂದ ಶಾಲಾ ಕೋಣೆ ಚಾವಣಿ ಸೋರುತ್ತಿರುವುದನ್ನು ಕಂಡು  ಕೂಡಲೆ ದುರಸ್ತಿಗೊಳಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರರಿಗೆ ಸೂಚಿಸಿದರು. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಶಾಲಾ ಮಕ್ಕಳನ್ನು ಬೇರೆ ಕೋಣೆಯಲ್ಲಿ ಕುಳ್ಳಿರಿಸಿ  ಪಾಠ ಮಾಡುವಂತೆ  ಬಿಇಒ ಮಾರುತಿ ಹುಜರಾತಿ ಅವರಿಗೆ ಡಿಸಿ ಸೂಚಿಸಿದರು. ನಂತರ ಘತ್ತರಗಾ ಸೇತುವೆ ಭೇಟಿ ನೀಡಿ ನೀರಿನ ಒಳಹರಿವು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಉಪ ವಿಭಾಗದ ಸಹಾಯಕ ಆಯುಕ್ತೆ ಮಮತಾ ಕುಮಾರಿ, ಗ್ರೇಡ್-೨  ತಹಶೀಲ್ದಾರ ಶರಣಬಸಪ್ಪ, ಸಹಾಯಕ ಕೃಷಿ ನಿರ್ದೇಶಕ ಸಿದ್ದಣ್ಣ ಗಡಗಿಮನಿ ಸೇರಿದಂತೆ ತಾಲೂಕಿನ ಅಧಿಕಾರಿಗಳಿದ್ದರು.