ಚಿತ್ರದುರ್ಗ: ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ಬಡಾವಣೆಗಳಿಗೆ ಗುರುವಾರ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಅಧಿಕಾರಿಗಳೊಂದಿಗೆ ಭೇ ಟಿ ನೀಡಿ ಪರಿಶೀಲಿಸಿದರು. ಒನಕೆ ಓಬವ್ವ ಕ್ರೀಡಾಂಗಣ ರಸ್ತೆ ಬುದ್ಧನಗರ,ಕೆಎಚ್‌ಬಿ ಕಾಲನಿ ಬಳಿಯ ಬಾಬು ಜಗಜೀವನ್‌ರಾಂ ನಗರ,ಸಾಧಿಕ್ ನಗರ,ಎಪಿಎಂಸಿ ರಸ್ತೆ ಸೇರಿ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಹಾನಿಗೆ ಒಳಗಾದ ಸಂತ್ರಸ್ಥರಿಗೆ ತ್ವರಿತವಾಗಿ ಪರಿಹಾರ ವಿ ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿಗಳು ಕಿರಿದಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಚರಂಡಿಗಳನ್ನು ಸರಿಪಡಿಸಿ ಸರಾಗ ನೀರಿನ ಹರಿವಿಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ನೀರು ನುಗ್ಗಿರುವ ಮನೆಗಳನ್ನು ನಗರಸಭೆಯಿಂದ ಪರಿಶೀಲಿಸಬೇಕು. ವಿವಿಧೆಡೆ ಮರಗಳು,ವಿದ್ಯುತ್ ಕಂಬಗಳು ಬಿದ್ದಿವೆ. ತಕ್ಷಣ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸ ಬೇಕು.
ಸಂಚಾರಕ್ಕೆ ಅಡ್ಡಿಯಾಗದಂತೆ ಮರ ಮತ್ತು ವಿದ್ಯುತ್ ಕಂಬಗಳನ್ನು ಶೀಘ್ರ ತೆರವುಗೊಳಿಸುವಂತೆ ಅರಣ್ಯ,ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾ ಡಿದರು. ಶಿಥಿಲ ವಿದ್ಯುತ್ ಕಂಬಗಳ ತೆರವಿಗೂ ಸೂಚಿಸಿದರು. ಬುದ್ಧನಗರ,ಸಾಧಿಕ್‌ನಗರ,ಬಾಬು ಜಗಜೀವನ್‌ರಾಂ ನಗರದ ಹಲವು ಮನೆ ಗಳಿಗೆ ನೀರು ನುಗ್ಗಿದ್ದರಿಂದ ದಿನಸಿ ವಸ್ತುಗಳು ಹಾಳಾಗಿದ್ದವು.
ಕಿರಿದಾದ ಚರಂಡಿಗಳಲ್ಲಿ ಕಸಕಡ್ಡಿ ತುಂಬಿದ್ದರಿಂದ ನೀರು ಮನೆಗಳಿಗೆ ನುಗ್ಗಿದೆ. ಇದಕ್ಕೆ ನಗರಸಭೆ ಹೊಣೆ ಎಂದು ನಿವಾಸಿಗಳು ದೂರಿದರು. ಇ ನ್ನು ಮುಂದೆ ಈ ರೀತಿ ಆಗಬಾರದು ಎಂದು ನಗರಸಭೆ ಅಧಿಕಾರಿಗಳನ್ನು ಡಿಸಿ ಎಚ್ಚರಿಸಿದರು. ತಹಸೀಲ್ದಾರ್ ಡಾ.ನಾಗವೇಣಿ,ನಗರಸಭೆ ಪೌ ರಾಯುಕ್ತ ಶ್ರೀನಿವಾಸ್,ಇಂಜಿನಿಯರ್ ಕಿರಣ್,ಪರಿಸರ ಇಂಜಿನಿಯರ್ ಜೆ.ಜಾಫರ್,ಅರಣ್ಯ,ಬೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇದ್ದರು.
ಬಿ.ದುರ್ಗದಲ್ಲಿ ಅಧಿಕ ಮಳೆ
ಹೊಳಲ್ಕೆರೆ ತಾಲೂಕಿನ ಬಿ.ದುರ್ಗದಲ್ಲಿ ಬುಧವಾರ 71.2 ಮಿ.ಮೀ.ಮಳೆಯಾಗಿದ್ದು,ಇದು ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಾಗಿದೆ. ಹೊಳ ಲ್ಕೆರೆ 1.2 ಮಿ.ಮೀ.,ಚಿಕ್ಕಜಾಜೂರು 25.8 ಮಿ.ಮೀ.,ಹೊಸದುರ್ಗ ತಾಲೂಕು ಬಾಗೂರು 5.1 ಮಿ.ಮೀ.,ಮಾಡದಕೆರೆ 5.2 ಮಿ.ಮೀ.,ಚಿ ತ್ರದುರ್ಗ 1ರಲ್ಲಿ 29.8 ಮಿ.ಮೀ.,ಎರಡರಲ್ಲಿ 23.6 ಮಿ.ಮೀ., ಭರಮಸಾಗರ 6.4 ಮಿ.ಮೀ.,ಸಿರಿಗೆರೆ-29.6 ಮಿ.ಮೀ.,ಮೊಳಕಾಲ್ಮೂರು ತಾಲೂಕು ಬಿ.ಜಿ.ಕೆರೆ 5 ಮಿ.ಮೀ.,ಚಳ್ಳಕೆರೆ 6.2 ಮಿ.ಮೀ.,ನಾಯಕನಹಟ್ಟಿ 26.2 ಮಿ.ಮೀ.ಹಾಗೂ ತಳಕಿನಲ್ಲಿ 9.4 ಮಿ.ಮೀ.ಮಳೆಯಾ ಗಿದೆ.ಜಿಲ್ಲಾದ್ಯಂತ 17 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. 13 ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ 6 ಮನೆಗಳು ಭಾಗಶಃ ಹಾನಿ ಹಾಗೂ 2 ಮನೆಗಳು ತೀವ್ರತರ ಹಾನಿಯಾಗಿದೆ.