filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5519051, 0.45857143);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46; 
ನ್ಯೂಸ್

ಮರು ಮತದಾನಕ್ಕೆ ಒತ್ತಾಯಿಸಿ ಪ್ರತಿಭಟನೆ

ಚಿತ್ರದುರ್ಗ: ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲದ್ದನ್ನು ಖಂಡಿಸಿ ಚಿತ್ರದುರ್ಗ ತಾಲೂಕು ಯರೇಹಳ್ಳಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದ್ದಾರೆ. ಆದ್ದರಿಂದ ಅಲ್ಲಿ ಮರು ಮತದಾನ ನಡೆಸ ಬೇಕು ಹಾಗೂ ಒಂದು ವಾರದೊಳಗೆ ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು.
ವಿದ್ಯುತ್‌ಪೂರೈಕೆ,ಮೊಬೈಲ್‌ನೆಟ್‌ವರ್ಕ್,ಕುಡಿವ ನೀರು,ಬಸ್ಸಿನ ಸಂಪರ್ಕ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತ ವಿಫಲ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು,ಬೇಡಿಕೆ ಈಡೇರಿಸದಿದ್ದರೆ ಯರೇಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾ ದಯಾತ್ರೆ ನಡೆಸಿ ಪ್ರತಿಭಟಿಸಲಾಗುವುದೆಂದು ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಹೇಳಿದರು. ನಾಗರಾಜ್‌ಮುತ್ತು,ಅಣ್ಣಪ್ಪ,ಅಖಿಲೇಶ್,ಪಿ. ಆರ್.ಹರೀಶ್‌ಕುಮಾರ್,ನಿಸಾರ್‌ಅಹಮದ್ ಮತ್ತಿತರರು ಇದ್ದರು.