ನ್ಯೂಸ್

ಮರು ಎಣಿಕೆಯಲ್ಲಿ ಮಂಜುನಾಥ್‌ಗೌಡ ಗೆದ್ದರೆ ರಾಜಕೀಯ ನಿವೃತ್ತಿ / ಕೆ.ವೈ.ನಂಜೇಗೌಡ

ವಿಜಯವಾಣಿ ಸುದ್ದಿಜಾಲ ಕೋಲಾರ

ಮಾಲೂರು ವಿಧಾನಸಭೆ ಚುನಾವಣೆಯಲ್ಲಿ ಮರು ಎಣಿಕೆಗೆ ಹೈ ಕೋರ್ಟ್ ಆದೇಶ ನೀಡಿದ್ದು, ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ರಾಜಕೀಯ ಬಿಡುವೆ ಎಂದು ಶಾಸಕ ಕೆ.ವೈ.ನಂಜೇಗೌಡ ಸವಾಲಾಕಿದರು.

ಕೋಲಾರ ತಾಲ್ಲೂಕು ರಾಮಸಂದ್ರ ಗಡಿಯಲ್ಲಿ ನಂದಿನಿ ಪಾರ್ಲರ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮರು ಎಣಿಕೆ ಆಗಲಿ. ಅಸಿಂಧು ವಿರುದ್ದ ನ್ಯಾಯಾಲಯದ ಮೊರೆ ಹೋಗುವೆ ಎಂದರು.

ಮಾಜಿ ಶಾಸಕ ಮಂಜುನಾಥ್ ಗೌಡ ಹಗಲು ಕನಸು ಕಾಣುತ್ತಿದ್ದಾರೆ, ಭ್ರಮೆಯಲ್ಲಿದ್ದಾರೆ, ಅವರ ಪರವಾಗಿ ಕೆಲ ಹುಚ್ಚರಿದ್ದಾರೆ, ಅವರು ಪಟಾಕಿ ಹೊಡೆದು ಸಿಹಿ ಹಂಚಿದ್ದಾರೆ, ಇನ್ನೂ ಅವರೇನು ಶಾಸಕರಾಗಿದ್ದಾರಾ, ಇಲ್ಲವಲ್ಲಾ. ಯಾರೋ ಕೆಲವರು ಸಂಭ್ರಮ ಮಾಡಿದ್ದಾರೆ. ಅವರೆಲ್ಲಾ ಹುಚ್ಚರು, ನಾನು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.

ನನ್ನ ವಿರುದ್ದ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ತೀರ್ಪು ಬಂದಿದೆ, ನಾನು ಸಹ ಹಲವು ಬಾರಿ ಹೇಳಿದ್ದೆ, ಮರು ಎಣಿಕೆ ಬದ್ಧ, ಆದ್ರೆ ಅಪೀಲು ಯಾಕೆ ಹೋಗ್ತಾ ಇದ್ದೀನಿ ಎಂದ್ರೆ ಚುನಾವಣೆ ಹಾಗೂ ಶಾಸಕ ಸ್ಥಾನದ ಅಸಿಂಧು ಗೊಳಿಸಿದ ಹಿನ್ನೆಲೆ ನಾನು ಅಪೀಲು ಹೋಗಬೇಕಾಗಿದೆ ಎಂದರು.

ಚುನಾವಣೆ ಪ್ರಕ್ರಿಯೆ ವಜಾ ಮಾಡಿದ ಮೇಲೆ ಚುನಾವಣೆ ಘೋಷಣೆ ಮಾಡಬೇಕಿತ್ತು. ಆದರೆ ಮರು ಎಣಿಕೆ ಮಾಡಿದರೆ ನಾನು ತಯಾರಿ ಇದ್ದೆ. ಚುನಾವಣೆ ಸರಿಯಿಲ್ಲ ಅಂದ ಮೇಲೆ ನಾನು ನ್ಯಾಯಾಲಯದ ತೀರ್ಪಿಗೆ ಅಪೀಲು ಹೋಗುವೆ ಎಂದರು.

ಇನ್ನೂ ಮತಕಳ್ಳತನವಾಗಿದೆ ಎಂಬ ಮಂಜುನಾಥ ಗೌಡ ಆರೋಪಕ್ಕೆ ತಿರುಗೇಟು ನೀಡಿ, ನಿಮ್ಮದೆ ಸರ್ಕಾರ, ನಿಮ್ಮದೆ ಮಂತ್ರಿ, ಅಧಿಕಾರಿಗಳು ನೀವೆ ಕಾವಲಿದ್ದು ಮತ ಎಣಿಕೆ ಮಾಡಿಸಿದ್ದು, ವಿವಿ ಪ್ಯಾಟ್ ಕೌಂಟಿAಗ್ ಮಾಡಿಸಿದ್ದು, ಅವರ ನಿಯಮಾನುಪ್ರಕಾರವೇ ಎಣಿಕೆ ಮಾಡಿದ್ದಾರೆ. ಮಂಜುನಾಥ್ ಗೌಡ ಅವರೆ ಕೈಯಿಂದ ತೆಗೆದ ವಿವಿ ಪ್ಯಾಡ್ ಚೆಕ್ ಮಾಡಿದರಲ್ಲ ಎಂದರು.

ಇನ್ನೂ ಅವರಿಗೆ ಹುಚ್ವು ಹಿಡಿದಿದೆ, ಆಕಸ್ಮಿಕವಾಗಿ ಇವರಿಗೆ ಮಾಲೂರಲ್ಲಿ ಅವಕಾಶ ಸಿಕ್ತು, ನಾವು ನಮ್ಮ ಪಕ್ಷದವರನ್ನೇ ಶಾಸಕರನ್ನಾಗಿ ಮಾಡಬೇಕಾಗಿತ್ತು. ಅವಕಾಶ ಸಿಕ್ಕಿದ ಕಾರಣ ಅವರನ್ನು ಆಗ ಶಾಸಕರಾಗಿ ಮಾಡಿದೆವು. ಆದರೆ ಅವರು ಜೀವಮಾನದಲ್ಲಿ ಹೊಸಕೋಟೆಯಲ್ಲಿ ಶಾಸಕರಾಗಲು ಸಾಧ್ಯವಿಲ್ಲ ಎಂದು ಸವಾಲಾಕಿ, ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ. ನಾನು ಸುಪ್ರೀಂಕೋರ್ಟ್ನಲ್ಲಿ ಚಾಲೆಂಜ್ ಮಾಡುವೆ. ಮಾಲೂರು ತಾಲ್ಲೂಕು ತಬ್ಬಲಿಯಾಗಿಲ್ಲ, ಮೂವತ್ತು ದಿನ ಸಮಯಾವಕಾಶ ಕೊಟ್ಟಿದ್ದಾರೆ. ಮರು ಎಣಿಕೆ ಆದರೆ ನೂರಕ್ಕೆ ನೂರು ನಾನು ಗೆಲ್ಲುವೆ ಎಂದರು.

ಚಿತ್ರ ೧೭ ಕೆ.ಎಲ್.ಆರ್. ೦೭ : ಕೆ.ವೈ.ನಂಜೇಗೌಡ ರವರ ಭಾವಚಿತ್ರ