ಸಾದಿಕ್ 
ನ್ಯೂಸ್

ಮರದಿಂದ ಬಿದ್ದಿದ್ದ ವ್ಯಕ್ತಿ ಸಾವು

ಹೊಸನಗರ: ತಾಲೂಕಿನ ಕಿಳಂದೂರು ಗ್ರಾಮದ ನೂಲಿಗೇರಿಯಲ್ಲಿ ಅಡಕೆ ಕೊನೆಗೆ ಔಷಧ ಸಿಂಪಡಣೆ ಮಾಡುವಾಗ ಮರದಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.

ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮತ್ತಿಮನೆ ನಿವಾಸಿ ಕೃಷಿ ಕಾರ್ಮಿಕ ಸಾದಿಕ್ (42) ಮೃತ ವ್ಯಕ್ತಿ. ಆ.18ರಂದು ಸಾದಿಕ್ ಮತ್ತು ಮಂಜುನಾಥ ಎಂಬುವವರು ಕಿಳಂದೂರು ಗ್ರಾಮದ ನೂಲಿಗೇರಿಯಲ್ಲಿ ಅಡಕೆ ತೋಟಕ್ಕೆ ಔಷಧ ಸಿಂಪಡಿಸುವಾಗ ಸಾದಿಕ್ ಮರದಿಂದ ಬಿದ್ದು ತೀವ್ರ ಗಾಯಗೊಂಡಿದ್ದ. ಬೆನ್ನು, ಕುತ್ತಿಗೆಯ ಹಿಂಭಾಗಕ್ಕೆ ಪೆಟ್ಟು ಬಿದ್ದಿತ್ತು. ಹೊಸನಗರ, ಶಿವಮೊಗ್ಗ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೊನೆಗೆ ಯನಪೋಯಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಗುರುವಾರ ರಾತ್ರಿ ಮನೆಗೆ ಕರೆತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.