ಚಾರ್ಮಾಡಿ ಘಾಟ್‌ನಲ್ಲಿ ಪಲ್ಟಿಯಾದ ತರಕಾರಿ ಸಾಗಣೆ ವಾಹನ. 
ನ್ಯೂಸ್

ಮರ ಬಿದ್ದು ವಾಹನ ಸಂಚಾರ ಸ್ಥಗಿತ

ಬಣಕಲ್: ಚಾರ್ಮಾಡಿ ಘಾಟ್‌ನ 3ನೇ ತಿರುವಿನಲ್ಲಿ ಸೋಮವಾರ ಮರ ಹೆದ್ದಾರಿಗೆ ಬಿದ್ದು 2 ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಜೆಸಿಬಿ ಸಹಾಯದಿಂದ ಹೆದ್ದಾರಿಗೆ ಬಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದರು.

ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ನಿಯಂತ್ರಣ ತಪ್ಪಿ ತರಕಾರಿ ಸಾಗಣೆ ವಾಹನ ಪಲ್ಟಿಯಾಗಿದೆ. ಮಂಗಳೂರು ಕಡೆಗೆ ತರಕಾರಿ ಸಾಗಿಸುತ್ತಿದ್ದ ವಾಹನ ಚಾರ್ಮಾಡಿ ಘಾಟಿಯ ಮಲೆಯಮಾರುತ ಬಳಿಯಲ್ಲಿ ಮಂಜು ಕವಿದ ಕಾರಣ ರಸ್ತೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.