ಕೋಲಾರ: ನಮ್ಮ ಸುದ್ದಿಗೆ ಬರಬೇಡ, ಮನೆಗೆ ಬರಬೇಡ ಎಂದು ಶನೈಶ್ಚರನನ್ನು ಬೇಡುತ್ತೇವೆ. ಆದರೆ ಬಿಜೆಪಿಯವರು ಮತದಾರರಿಗೆ ಪ್ರಸಾದದ ಜತೆಗೆ ಶನೈಶ್ಚರನ ಫೋಟೋ ಕೊಟ್ಟು ಶನಿಯನ್ನು ಮನೆಗೆ ಕರೆಸುತ್ತಿದ್ದಾರೆ ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ಟೀಕಿಸಿದರು.
ನಗರದ ಕಾಬಾ ಪ್ಲಾಜಾದಲ್ಲಿ ಮಂಗಳವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ವಿಧಾನಪರಿಷತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂದರೆ ಮತದಾರರನ್ನು ಭೇಟಿ ಮಾಡುವುದು ಪದ್ಧತಿ. ಅದರಂತೆ ಪರಿಷತ್ ಚುನಾವಣೆಯ ಎಲ್ಲ 11 ಕ್ಷೇತ್ರಗಳಲ್ಲೂ ಮತದಾರರನ್ನು ಭೇಟಿ ಮಾಡಿ ನಮ್ಮ ಅಳಲು ತೋಡಿಕೊಂಡಿದ್ದೇವೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಎಲ್ಲೂ ಹೋಗಿಲ್ಲ ಎಂದರೆ ಒಳಗಿನ ಹೂರಣ ತಿಳಿದುಕೊಳ್ಳಿ ಎಂದರು.
ಚುನಾವಣೆಗೆ ಹಣ ಕೊಟ್ಟಿದ್ದಾರೆಂದು ಹಗುರವಾಗಿ ಹೇಳಲು ನಾನು ರೆಡಿ ಇಲ್ಲ. ಮಂಜುನಾಥಸ್ವಾಮಿ, ವೆಂಕಟರಮಣಸ್ವಾಮಿಯ ಫೋಟೋ ಕೊಡುವುದಕ್ಕೆ ಆಕ್ಷೇಪವೂ ಇಲ್ಲ. ಆದರೆ ಇವರು (ಬಿಜೆಪಿ) ಶನೈಶ್ಚರನ ಫೋಟೋ ಕೊಡುತ್ತಿದ್ದಾರೆ ಎಂದರೆ ಮನೆಗೆ ಶನಿ ಬರಲಿ ಎಂದೇ ಎಂಬುದು ಗೊತ್ತಾಗುವುದಿಲ್ಲ. ಎಲ್ಲಿ ಬೌದ್ಧಿಕ ದಾರಿದ್ರ್ಯ ಇದೆಯೋ ಹೇಳಿಕೊಳ್ಳಲು ಏನು ವಿಷಯ ಇಲ್ಲವೋ ಆಗ ಈ ಕೆಲಸಗಳನ್ನು ಮಾಡುತ್ತಾರೆ. ಪ್ರಜಾಪ್ರಭುತ್ವಕ್ಕೆ ಇದು ಆರೋಗ್ಯಕರವಾದ ಲಕ್ಷಣವಲ್ಲ ಎಂದು ನುಡಿದರು.
ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ಜಿಲ್ಲೆಗೆ ಎತ್ತಿನಹೊಳೆ ನೀರು ತರಲು 14,000 ಕೋಟಿ ನೀಡಿ ಕೆಲಸ ಶುರು ಮಾಡಿದ್ದು ಕಾಂಗ್ರೆಸ್. 2018ರಲ್ಲಿ ನಾವು ಎಲ್ಲಿ ಬಿಟ್ಟು ಹೋಗಿದ್ದೇವೋ ಅಲ್ಲೇ ಕೆಲಸ ನಿಂತಿದೆ. ಒಂದಿಂಚು ಕಾಮಗಾರಿ ನಡೆದಿಲ್ಲ. ಮತದಾರರು ಈ ಕಾರಣಕ್ಕೆ ವೋಟು ಕೊಡಬೇಕಾ ಎಂದು ಬಿಜೆಪಿಯವರನ್ನು ಪ್ರಶ್ನಿಸಿ ಎಂದರು.
ಕೆಸಿ ವ್ಯಾಲಿ ಯೋಜನೆ ಮಾಡಿಸಿಕೊಟ್ಟಿದ್ದು ಕಾಂಗ್ರೆಸ್. ಟೀಕಿಸುತ್ತಿರುವವರು ತಾವು ಸಿಎಂ ಆಗಿದ್ದಾಗ ಗಂಗಾ, ಕಾವೇರಿ ಅಥವಾ ಹೇಮಾವತಿ ನೀರು ತಂದುಕೊಟ್ಟಿದ್ದರೆ ಹಾರ ಹಾಕಿ ಧನ್ಯವಾದ ಹೇಳ್ತೀವಿ. ವೋಟು ಬೇಕೆನ್ನುವ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ಏನು ಕೊಟ್ಟಿದ್ದೀರೆಂದು ಹೇಳಲಿ ಎಂದು ಸವಾಲು ಹಾಕಿದರು.
ಅಭ್ಯರ್ಥಿ ಎಂ.ಎಲ್. ಅನಿಲ್ ಕುಮಾರ್, ಎಐಸಿಸಿ ವೀಕ್ಷಕರಾದ ಅಂಡಮಾನ್ ನಿಕೋಬಾರ್ ಕ್ಷೇತ್ರದ ಸಂಸದ ಅನಿಲ್ ಶರ್ಮಾ, ತೆಲಂಗಾಣದ ಶ್ರೀಧರ್ ಬಾಬು, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಿಧಾನಪರಿಷತ್ ಶಾಸಕರಾದ ಸುಬ್ಬಾರೆಡ್ಡಿ, ಎನ್.ಎಚ್.ಶಿವಶಂಕರರೆಡ್ಡಿ, ಕೆ.ವೈ.ನಂಜೇಗೌಡ, ವಿ.ಮುನಿಯಪ್ಪ, ಎಮ್ಮೆಲ್ಸಿ ನಜೀರ್ ಅಹಮದ್, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವ ನಿಸಾರ್ ಅಹಮದ್, ಕೆಪಿಸಿಸಿ ವೀಕ್ಷಕರಾದ ಕೆಂಚೇಗೌಡ, ಶಂಕರ್, ಚಿಕ್ಕಬಳ್ಳಾಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಎಸ್. ಮಂಜುನಾಥ್ ಇತರರು ಇದ್ದರು.
ಆಂಧ್ರದ ಗಡಿ ಟೋಲ್‌ಗೇಟ್ ಬಳಿ ಬಿಜೆಪಿ ನಾಯಕರು 20-30 ಕಾರು ನಿಲ್ಲಿಸಿಕೊಂಡು ಗ್ರಾಪಂ ಸದಸ್ಯರನ್ನು ಕ್ಯೂ ನಿಲ್ಲಿಸಿ ಧರ್ಮಸ್ಥಳ ಮಂಜುನಾಥಸ್ವಾಮಿ ಪ್ರಸಾದ, ಶನೈಶ್ಚರಸ್ವಾಮಿಯ ಫೋಟೋ, 75ರಿಂದ 1 ಲಕ್ಷ ರೂ. ದುಡ್ಡು, ತಿರುಪತಿ ಲಡ್ಡು ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದರೆ ಇವರಿಗೆ ಹಣ ಎಲ್ಲಿಂದ ಬಂತು ಎಂದು ಗೊತ್ತಾಗುತ್ತಿಲ್ಲ. ಚರಿತ್ರೆಯಲ್ಲಿ ನೂರು, ಐನೂರು ರೂಪಾಯಿ ಕೊಟ್ಟಿದ್ದನ್ನು ನೋಡಿದ್ದೇವೆ. ಆದರೆ ಒಂದು ವೋಟ್‌ಗೆ 1 ಲಕ್ಷ ರೂ. ನೀಡಿರುವ ಚರಿತ್ರೆಯನ್ನು ಗಿನ್ನಿಸ್ ದಾಖಲೆಗೆ ಕಳುಹಿಸಬೇಕು. ಕೊತ್ತೂರು ಮಂಜುನಾಥ್, ಮಾಜಿ ಶಾಸಕ