ನ್ಯೂಸ್

ಮನೆ ಗೋಡೆ ಕುಸಿತ ವೃದ್ಧೆ ಸಾವು

ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿಯ ಈಚಲನಾಗೇನಹಳ್ಳಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಗ್ರಾಮದ ವಾಸಿ ರಂಗಮ್ಮ (70) ಮೃತಪಟ್ಟಿದ್ದಾರೆ.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕೃತಿ ವಿಕೋಪ ಜೀವಹಾನಿ ಸಂಬಂಧ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 5 ಲಕ್ಷ ರೂ. ಪರಿಹಾರದ ಆದೇಶ ಪ್ರತಿಯನ್ನು ಕುಟುಂಬ ಸದಸ್ಯರಿಗೆ ನೀಡಿದರು.