ನ್ಯೂಸ್

ಮದ್ದೂರು ಕ್ಷೇತ್ರದ ಜನತೆ ಸೇವೆಗೆ ಸದಾ ಸಿದ್ಧ

ಕೆ.ಎಂ.ದೊಡ್ಡಿ: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮದ್ದೂರು ಕ್ಷೇತ್ರದ ಜನರ ಸೇವೆಗೆ ನಿರಂತರವಾಗಿ ಶ್ರಮಿಸಲಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.


ಸಮೀಪದ ಅರೆತಿಪ್ಪೂರು ಗ್ರಾಮದಲ್ಲಿ ಶುಕ್ರವಾರ ಪಾರ್ಶ್ವ ವಾಯುಪೀಡಿತ ನಾಥಪ್ಪ, ಅಂಗವಿಕಲರಾದ ಮೀನಾಕ್ಷಿ ಹಾಗೂ ಬಿರೇಶ್ ಅವರಿಗೆ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಿ ಮಾತನಾಡಿದರು.


ಕಳೆದ ಮೂರ್ನಾಲ್ಕು ವರ್ಷಗಳಿಂದ ಟ್ರಸ್ಟ್ ವತಿಯಿಂದ ಮದ್ದೂರು ಕ್ಷೇತ್ರದಲ್ಲಿ ನಿಧನರಾದ ಕುಟುಂಬಕ್ಕೆ, ವಿಕಲಚೇತನರಿಗೆ ಧನ ಸಹಾಯ ನೀಡುತ್ತ ಬರಲಾಗುತ್ತಿದೆ. ಈ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದರು.


ನಾನು ಶಾಸಕನಾದ ಮೇಲೆ ಟ್ರಸ್ಟ್ ವತಿಯಿಂದ ಹೆಚ್ಚಿನ ಸಹಾಯ ನೀಡುವುದನ್ನು ಮುಂದುವರಿಸಿದ್ದು, ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.


ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲೆ ಶಾಸಕರ ಕಚೇರಿ ತೆರೆಯಲಾಗಿದೆ. ಇದರ ಜತೆಗೆ ಕೆ.ಎಂ.ದೊಡ್ಡಿ ಹಾಗೂ ಕದಲೂರಿನ ನನ್ನ ನಿವಾಸ ಮತ್ತು ಟ್ರಸ್ಟ್ ಕಚೇರಿಯಲ್ಲಿ ನನ್ನನ್ನು ಸಂಪರ್ಕಿಸಬಹುದು. ನಿಮ್ಮ ಸೇವೆಗೆ ನಾನು ನಿರಂತರವಾಗಿ ಜತೆಗಿರುತ್ತೆನೆಂದು ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮುಖಂಡರಾದ ಕದಲೂರು ತಿಮ್ಮೇಗೌಡ, ತಿಪ್ಪೂರು ಮನು, ದಿಗಂತ, ಟಿ.ಎಸ್ ಪುಟ್ಟಸ್ವಾಮಿ ಇತರರಿದ್ದರು.

ಅರೆತಿಪ್ಪೂರು ಗ್ರಾಮದಲ್ಲಿ ಶುಕ್ರವಾರ ಪಾರ್ಶ್ವ ವಾಯುಪಿಡೀತ ನಾಥಪ್ಪ, ಅಂಗವಿಕಲಾರದ ಮೀನಾಕ್ಷಿ, ಬಿರೇಶ್ ಟ್ರಸ್ಟ್ ವತಿಯಿಂದ ಶಾಸಕ ಕದಲೂರು ಉದಯ್ ಆರ್ಥಿಕ ನೆರವು ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮುಖಂಡರಾದ ಕದಲೂರು ತಿಮ್ಮೇಗೌಡ, ತಿಪ್ಪೂರು ಮನು ಇತರರಿದ್ದರು.