ಬೆಂಗಳೂರು: ಬೈಕ್‌ಗೆ ಬಸ್ ತಗುಲಿದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದಲ್ಲದೇ ಬಸ್ಸಿನ ಗಾಜು ಅನ್ನು ಹೊಡೆದಿದ್ದ ಮೆಕಾನಿಕ್‌ನನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಾಸಿಪಾಳ್ಯ ನಿವಾಸಿ ಮುಜಾಹಿದ್(೩೪) ಬಂಧಿತ. ಆರೋಪಿ ಕಲಾಸಿಪಾಳ್ಯದಲ್ಲಿ ಮೆಕಾನಿಕ್ ಆಗಿದ್ದು ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಕಾರ್ಪೋರೇಷನ್ ಕಡೆಯಿಂದ ಟೌನ್‌ಹಾಲ್ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ. ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ ಮುಜಾಹಿದ್ ತಗುಲಿದೆ ಎನ್ನಲಾಗಿದೆ. ಇಷ್ಟಕ್ಕೆ ಕೋಪಗೊಂಡ ಮುಜಾಹಿದ್, ಬಸ್ ಚಾಲಕನಿಗೆ ಕೈ ತೋರಿಸಿ ನಿಂದಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಬಸ್ ಚಾಲಕ ಕೂಡ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಮುಜಾಹಿದ್, ಕಾರ್ಪೋರೇಷನ್ ಜಂಕ್ಷನ್ ಬಳಿ ಬಸ್ ಅಡ್ಡಗಟ್ಟಿ ಸುತ್ತಿಗೆಯಿಂದ ಬಸ್‌ನ ಮುಂಭಾಗದ ಗಾಜಿಗೆ ಹೊಡೆದು ಧ್ವಂಸಗೊಳಿಸಿದ್ದಾನೆ. ಗಾಂಜಿನ ಚೂರುಗಳು ಚಾಲಕನಿಗೂ ಸಿಡಿದು ಗಾಯವಾಗಿದೆ. ಆಗ ಬಸ್‌ನಲ್ಲಿದ್ದ ಪ್ರಯಾಣಿಕರು ಮತ್ತು ಬಸ್ ನಿರ್ವಾಹಕರ ಹಾಗೂ ಸಾರ್ವಜನಿಕರು ಮುಜಾಹಿದ್‌ನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ನಂತರ ಬಸ್ ಚಾಲಕ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು. ಎಸ್.ಜೆ.ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.