ನ್ಯೂಸ್

ಮತದಾರರ ಪಟ್ಟಿಗೂ ಆಧಾರ್ ಸಂಖ್ಯೆ ನೋಂದಣಿ

ತುಮಕೂರು: ಮತದಾರರ ಪಟ್ಟಿಯಲ್ಲಿರುವ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಹೆಸರು, ವಿಳಾಸ ಇತ್ಯಾದಿಗಳನ್ನು ದೃಢೀಕರಿಸಲು ಆಧಾರ್ ಸಂಖ್ಯೆ ನೋಂದಣಿಗೆ ಭಾರತ ಚುನಾವಣಾ ಆಯೋಗ ಸೂಚಿಸಿದೆ.

ಆಧಾರ್ ಸಂಖ್ಯೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಮೂನೆ-6ಬಿ ರಲ್ಲಿ ಆಧಾರ ಸಂಖ್ಯೆಯನ್ನು ಭರ್ತಿ ಮಾಡಿ ದೃಢೀಕರಿಸಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮತದಾರರಿಗೆ ಮನವಿ ಮಾಡಿದ್ದಾರೆ.

ಆಧಾರ್ ಸಂಖ್ಯೆ ದೃಢೀಕರಣ ಕಾರ್ಯ 2022 ಆ.1ರಿಂದ ಮಾರ್ಚ್ 31, 2023ರ ವರೆಗೆ ನಡೆಯಲಿದೆ