ನ್ಯೂಸ್

ಮತದಾರರ ಪಟ್ಟಿ ಬದಲಾವಣೆಗೆ ಕೋಲಾರ ಚುನಾವಣಾ ವಿಭಾಗದಿಂದ ವಿಶೇಷ ಅಭಿಯಾನ/ ಸಿ.ಇ.ಓ ಪದ್ಮ ಬಸವಂತಪ್ಪ.

ಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ಬದಲಾವಣೆ ಸೇರಿದಂತೆ ಮತ್ತಿತರ ತಿದ್ದುಪಡಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೋಲಾರ ಚುನಾವಣಾ ವಿಭಾಗದಿಂದ ಡಿ.೨ ಮತ್ತು ೩ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿ.ಇ.ಓ. ಪದ್ಮಬಸವಂತಪ್ಪ ತಿಳಿಸಿದ್ದಾರೆ.

ಕೋಲಾರ ಜಿಲ್ಲೆ ವ್ಯಾಪ್ತಿಯ ೬ ವಿಧಾನಸಭಾ ಕ್ಷೇತ್ರಗಳಿಗೆ ಸಂಬAಧಿಸಿದAತೆ ಕಳೆದ ಅಕ್ಟೋಬರ್ ೨೭ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಅದರಲ್ಲಿ ಏನಾದರೂ ಬದಲಾವಣೆಗಳಿದ್ದರೆ ಅದನ್ನು ಸರಿಪಡಿಸಲು ಡಿ.೯ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅದರ ಜತೆಗೆ ಇದೀಗ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶನಿವಾರ ಮತ್ತು ಭಾನುವಾರಗಳಂದೂ ಕರಡು ಪಟ್ಟಿಯಲ್ಲಿ ಬದಲಾವಣೆಗೆ ಅವಕಾಶ ನೀಡಲಾಗುತ್ತಿದೆ. ಅದರಂತೆ ನ.೧೮-೧೯ ರಂದು ಅವಕಾಶ ನೀಡಲಾಗಿತ್ತು. ಹಾಗೂ ಡಿ.೨ ಮತ್ತು ೩ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕೆನ್ನುವವರು, ಪಟ್ಟಿಯಲ್ಲಿ ಹೆಸರು ಬದಲಾವಣೆ ಅಥವಾ ಇನ್ನಿತರ ತಿದ್ದುಪಡಿ ಮಾಡಿಕೊಳ್ಳಲು ಇಚ್ಛಿಸುವವರು ವಿಶೇಷ ಅಭಿಯಾನದ ದಿನಗಳಂದು ತಾಲ್ಲೂಕು ಕಂದಾಯ ಅಧಿಕಾರಿ, ಸಹ ಕಂದಾಯ ಅಧಿಕಾರಿ, ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ಮತದಾರರ ಪಟ್ಟಿಗೆ ಹೆಸರು ಸೇರಿಸಲಿಚ್ಛಿಸುವವರು ವೆಬ್‌ಸೈಟ್ voಣeಡಿs.eಛಿi.gov.iಟಿ ಅಥವಾ voಣeಡಿ heಟಠಿಟiಟಿe ಮೊಬೈಲ್ ಆಪ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೋಲಾರ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಸಿ.ಇ.ಓ. ಪದ್ಮ ಬಸವಂತಪ್ಪ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರ ೧೯ ಕೆ.ಎಲ್.ಆರ್. ೦೧ : ಸಿ.ಇ.ಓ. ಪದ್ಮ ಬಸವಂತಪ್ಪ ರವರ ಭಾವಚಿತ್ರ