ನ್ಯೂಸ್

ಮಕ್ಕಳಿಲ್ಲದೆ ಮುಚ್ಚಿರುವ ಸರ್ಕಾರಿ ಶಾಲೆಗಳಿಗೂ ಶಿಕ್ಷಕರ ನಿಯುಕ್ತಿ / ಶಿಕ್ಷಣ ಇಲಾಖೆಯ ಯಡವಟ್ಟು / ೧೦ ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳಲ್ಲಿ ಇಬ್ಬರು ಶಿಕ್ಷಕರು / ಕಣ್ಣು ಮುಚ್ಚಿ ಕುಳಿತಿರುವ ಶಿಕ್ಷಣ ಇಲಾಖೆ

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಸರ್ಕಾರ ಶಿಕ್ಷಕರಿಗಾಗಿ, ಶಾಲೆಗಳ ನಿರ್ಮಾಣ, ದುರಸ್ಥಿಗೆ ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡುತ್ತಿದೆ. ಶಿಕ್ಷಕರ ಗುಂಪುಗಾರಿಕೆ, ಕಳ್ಳಾಟ, ಶಿಕ್ಷಣ ಇಲಾಖೆಯ ಯಡವಟ್ಟುಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಮೌಲ್ಯ ಕುಸಿಯುತ್ತಿರುವುದರಿಂದ ಆತಂಕಗೊAಡ ಪಾಲಕರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಖಾಸಗಿ ಶಾಲೆಗಳಿಗೆ ಸೇರಿಸುವಂತಾಗಿದೆ.

ಇದಕ್ಕೆ ತಾಜಾ ಉದಾಹರಣೆಯೆಂದರೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಪಂಚಾಯ್ತಿಯ ಕೋಡಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ೦೨ ವರ್ಷಗಳ ಹಿಂದೆ ಮಕ್ಕಳಿಲ್ಲದೆ ಮುಚ್ಚಲ್ಪಟ್ಟಿರುವ ಶಾಲೆಗೆ ಪ್ರಸ್ತುತ ಶೈಕ್ಷಣಿಕ ವರ್ಷದ ಸಾಮಾನ್ಯ ವರ್ಗಾವಣೆಯಲ್ಲಿ ಮುಚ್ಚಲ್ಪಟ್ಟಿರುವ ಶಾಲೆಗೆ ಹುದ್ದೆಯನ್ನು ತೋರಿಸಿದ ಕಾರಣ ಶಿಕ್ಷಕರೊಬ್ಬರು ಸ್ಥಳ ನಿಯುಕ್ತಿ ಮಾಡಿಕೊಂಡಿದ್ದಾರೆ.

ಸಾಮಾನ್ಯ ವರ್ಗಾವಣೆ ನಡೆದು ಒಂದು ವಾರ ಕಳೆದಿದೆ. ಸದರಿ ಶಾಲೆಯು ಈಗಲೂ ಬಾಗಿಲು ಮುಚ್ಚಿದ್ದು, ಸ್ಥಳ ನಿಯುಕ್ತಿಗೊಂಡಿರುವ ಶಿಕ್ಷಕನಿಗೆ ಮಕ್ಕಳಿರುವ ಶಾಲೆಗೆ ನಿಯೋಜನೆಗೊಳಿಸದೇ ಇರುವುದರಿಂದ ಸದರಿ ಶಿಕ್ಷಕ ಅಲೆಯುವಂತಾಗಿದೆ. ಇದರಿಂದ ಸರ್ಕಾರಿ ಭೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟುಮಾಡಿದAತಾಗಿದೆ.

ಇದೇ ರೀತಿ ಕಳೆದ ವರ್ಷ ೨೦೨೩-೨೪ನೇ ಸಾಲಿನಲ್ಲಿ ಮುಳಬಾಗಿಲು ತಾಲ್ಲೂಕಿನ ಬೇವಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಲ್ಲದ ಕಾರಣ ಮುಚ್ಚಲ್ಪಟ್ಟಿತ್ತು. ಈ ಹಿಂದೆ ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸದರಿ ಶಾಲೆಯಲ್ಲಿದ್ದ ೦೩ ಜನ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜನೆಗೊಳಿಸಲಾಗಿತ್ತು. ಆದರೂ ಸಹ ಕಳೆದ ವರ್ಷ ನಡೆದ ಸಾಮಾನ್ಯ ವರ್ಗಾವಣೆಯಲ್ಲಿ ಅದೇ ಮುಚ್ಚಲ್ಪಟ್ಟ ಶಾಲೆಗೆ ಹುದ್ದೆ ಖಾಲಿ ಇದೆ ಎಂದು ಇಲಾಖೆ ಕಾಯ್ದಿರಿಸಿದ ಕಾರಣ ಇಬ್ಬರು ಶಿಕ್ಷಕರನ್ನು ಸ್ಥಳ ನಿಯುಕ್ತಿ ಮಾಡಿಕೊಂಡಿದ್ದರು. ಇಲ್ಲಿಯೂ ಸಹ ಶಿಕ್ಷಣ ಇಲಾಖೆಯ ಯಡವಟ್ಟಿನಿಂದಾಗಿ ಕೆಲವು ದಿನಗಳ ನಂತರ ಸದರಿ ಶಿಕ್ಷಕರಿಗೆ ಬೇರೆ ಮಕ್ಕಳಿರುವ ಶಾಲೆಗೆ ಇಲಾಖೆ ನಿಯೋಜನೆಗೊಳಿಸಿತ್ತು.

ಸದರಿ ಶೈಕ್ಷಣಿಕ ವರ್ಷದಲ್ಲಿ ೦೪ ಜನ ಮಕ್ಕಳು ಶಾಲೆಗೆ ಬಂದ ಕಾರಣ ನಿಯೋಜನೆಗೊಂಡಿದ್ದ ಶಿಕ್ಷಕರು ಈಗ ಸದರಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ೦೪ ಜನ ಮಕ್ಕಳಿಗೆ ಇಬ್ಬರು ಶಿಕ್ಷಕರಿದ್ದಾರೆ.

ಜಿಲ್ಲೆಯಾದ್ಯಂತ ಇದೇ ರೀತಿ ಮುಚ್ಚಲ್ಪಟ್ಟಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯವರ ನಿರ್ಲಕ್ಷತೆಯಿಂದಾಗಿ ವರ್ಗಾವಣೆ ಸಮಯದಲ್ಲಿ ಕಾಯ್ದಿರಿಸದೇ ಇರುವುದರಿಂದ ಅಂತಹ ಶಾಲೆಗಳಿಗೂ ಶಿಕ್ಷಕರು ನಿಯುಕ್ತಿಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಲು ಕೆಲವು ಶಿಕ್ಷಕರು ಕಾಯುತ್ತಿರುತ್ತಾರೆ. ಕಾರಣ ಪಾಠ ಮಾಡದೆ ಕೆಲವು ದಿನಗಳ ಕಾಲಹರಣ ಮಾಡಲು ಇದೊಂದು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬುವುದು ಶಿಕ್ಷಣ ಇಲಾಖೆಯಲ್ಲಿ ಆರೋಪಗಳು ಕೇಳಿ ಬರುತ್ತಿವೆ.

ಪಾಠ ಮಾಡಲು ಇಚ್ಛಿಸದೇ ಇರುವಂತಹ ಶಿಕ್ಷಕರು ೦೧ ರಿಂದ ೧೦ರ ಒಳಗೆ ಮಕ್ಕಳ ದಾಖಲಾತಿ ಇರುವಂತಹ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಾಮಾನ್ಯ ವರ್ಗಾವಣೆ ಸಮಯದಲ್ಲಿ ಅಂತಹ ಶಾಲೆಗಳಿಗೆ ಬಂದು ಕಾಲಹರಣ ಮಾಡುವಂತಹವರು ಹೆಚ್ಚಾಗಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರವೇ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ಹಾಜರಾತಿ ಇರುವಂತಹ ಶಾಲೆಗಳು ೫೦ ರಿಂದ ೬೦ ಶಾಲೆಗಳು ಇದ್ದು, ಸದರಿ ಶಾಲೆಗಳಲ್ಲಿ ಇಬ್ಬಿಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಿಕ್ಷಣ ಇಲಾಖೆಯ ನಿಯಮಾನುಸಾರ ೧೧ ಮಕ್ಕಳಿದ್ದ ಶಾಲೆಗೆ ಇಬ್ಬರು ಶಿಕ್ಷಕರು ಇರಬೇಕೆಂದು ಆದೇಶವಿದೆ. ಆದರೆ ಅನೇಕ ಶಾಲೆಗಳಲ್ಲಿ ೧೦ ಮಕ್ಕಳಿಗಿಂತ ಕಡಿಮೆ ದಾಖಲಾತಿ ಇದೆ. ಶಿಕ್ಷಕರು ಉಳಿದುಕೊಳ್ಳಲು ನಕಲಿ ದಾಖಲಾತಿಗಳನ್ನು ಸೃಷ್ಠಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಹಾಜರಾತಿಯಲ್ಲಿ ಮಾತ್ರ ಕಡಿಮೆ ಮಕ್ಕಳ ಸಂಖ್ಯೆ ಕಂಡುಬರುತ್ತಿದೆ ಎಂದು ಶಿಕ್ಷಕರ ವಲಯಗಳಿಂದಲೇ ಕೇಳಿ ಬರುತ್ತಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಚ್ಚು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆ, ತಾಡಿಗೋಳ್, ಪಟ್ಟಣದ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರೋಜಿ ರಸ್ತೆಯ ಹಿರಿಯ ಪ್ರಾಥಮಿಕ ಶಾಲೆ, ಯಲ್ದೂರು, ಅಡ್ಡಗಲ್ ಸೇರಿದಂತೆ ಸುಮಾರು ೨೦ ಶಾಲೆಗಳಲ್ಲಿ ೧೦೦ ಕ್ಕೂ ಹೆಚ್ಚು ಮಕ್ಕಳು ಹಾಜರಾತಿ ಇದ್ದರೂ ಅಂತಹ ಶಾಲೆಗಳಿಗೆ ಶಿಕ್ಷಕರ ಅವಶ್ಯಕತೆ ಇದ್ದರು, ಶಿಕ್ಷಕರನ್ನು ನೀಡಿಲ್ಲ.

ಶಿಕ್ಷಕರಿಬ್ಬರು ಜಗಳದಿಂದ ಶಾಲೆ ಬಂದ್ :
ತಾಲ್ಲೂಕಿನ ಲಕ್ಷಿö್ಮÃಪುರ ಪಂಚಾಯ್ತಿ, ಪಾತಕೋಟೆ ಗ್ರಾಮದಲ್ಲಿ ಇಬ್ಬರು ಮಕ್ಕಳಿಗೆ ಇಬ್ಬರು ಶಿಕ್ಷಕರು ಇದ್ದು, ಒಬ್ಬರನ್ನು ಲಕ್ಷಿö್ಮÃಪುರಕ್ಕೆ ಇಲಾಖೆ ನಿಯೋಜನೆಗೊಳಿಸಿದ್ದಕ್ಕೆ ಮತ್ತೊಬ್ಬ ಶಿಕ್ಷಕರಿಗೆ ಪ್ರಭಾರ ನೀಡದ್ದಕ್ಕೆ ಇದ್ದ ಇಬ್ಬರು ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳುಹಿಸಿಕೊಟ್ಟ ಘಟನೆ ನಡೆದಿದ್ದು, ಇದರಿಂದಾಗಿ ಇಬ್ಬರು ಶಿಕ್ಷಕರ ಜಗಳದಿಂದಾಗಿ ಗ್ರಾಮದ ಶಾಲೆಯೇ ಮುಚ್ಚುವಂತಾಗಿದೆ.

ಕೋಟ್
ಮಕ್ಕಳಿಲ್ಲದೆ ಮುಚ್ಚಲ್ಪಟ್ಟಿರುವ ಶಾಲೆಗೆ ೦೩ ವರ್ಷಗಳ ಕಾಲ ಶಿಕ್ಷರ ಹುದ್ದೆ ಬ್ಲಾಕ್ ಲಿಸ್ಟಿಗೆ ಹಾಕುವಂತಿಲ್ಲ. ವರ್ಗಾವಣೆಯ ಸಂದರ್ಭದಲ್ಲಿ ಸದರಿ ಶಾಲೆಯ ಹುದ್ದೆ ತೋರಿಸಬೇಕಾಗುತ್ತದೆ. ಆ ಹುದ್ದೆಗೆ ಕೌನ್ಸಿಲಿಂಗ್‌ನಲ್ಲಿ ಸ್ಥಳ ನಿಯುಕ್ತಿಗೊಳ್ಳುವ ಶಿಕ್ಷಕನನ್ನು ನಿಯೋಜನೆ ಮೇರೆಗೆ ಮಕ್ಕಳಿರುವ ಬೇರೆ ಶಾಲೆಗೆ ಕಳುಹಿಸಿಕೊಡಲಾಗುತ್ತದೆ. ೧೦ ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳಲ್ಲಿರುವ ಶಿಕ್ಷಕರ ಮಾಹಿತಿ ನೀಡಲು ನಿರಾಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾನು ಕಛೇರಿಯಲಿಲ್ಲ. ಕಛೇರಿಗೆ ಬಂದ ನಂತರ ಮಾಹಿತಿ ನೀಡುತ್ತೇನೆ ಎಂದವರು ಮತ್ತೆ ದೂರವಾಣಿ ಕರೆ ಸ್ವೀಕರಿಸಲಿಲ್ಲ.

-ಮುನಿಲಕ್ಷö್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಶ್ರೀನಿವಾಸಪುರ.

ಕೋಟ್
ಮಕ್ಕಳು ಇಲ್ಲದೆ ಮುಚ್ಚಲ್ಪಟ್ಟಿರುವ ಶಾಲೆಯ ಶಿಕ್ಷಕರ ಅವಶ್ಯಕತೆ ಬಗ್ಗೆ ಇಲಾಖೆಗೆ ಮಾಹಿತಿ ನೀಡುವುದು, ಆಯಾ ತಾಲ್ಲೂಕಿನ ಶಿಕ್ಷಣಾಧಿಕಾರಿಗಳ ಕರ್ತವ್ಯ. ಅವರು ನೀಡುವ ಪಟ್ಟಿಯಂತೆ ಆನ್‌ಲೈನ್‌ನಲ್ಲಿ ಕೌನ್ಸಿಲಿಂಗ್‌ನಲ್ಲಿ ಖಾಲಿ ಹುದ್ದೆ ತೋರಿಸುತ್ತಿದೆ. ಮುಚ್ಚಲ್ಪಟ್ಟಿರುವ ಶಾಲೆಗಳಿಗೆ ಶಿಕ್ಷಕರು ನಿಯುಕ್ತಿಗೊಂಡಿರುವುದರ ಬಗ್ಗೆ ನನ್ನ ಗಮನಕ್ಕೆ ಮಾಹಿತಿ ಇಲ್ಲ. ನಾನು ರಜದಲ್ಲಿರುವ ಕಾರಣ ಸೋಮವಾರ ಜಿಲ್ಲೆಯಲ್ಲಿ ಈ ರೀತಿ ಆಗಿರುವ ಯಡವಟ್ಟುಗಳ ಬಗ್ಗೆ ಮಾಹಿತಿ ನೀಡುತ್ತೇನೆ.

                                          -ಕೃಷ್ಣಮೂರ್ತಿ, ಶಿಕ್ಷಣ ಇಲಾಖೆ ಉಪನಿರ್ದೇಶಕರು. 

ಚಿತ್ರ ೨೨ ಕೆ.ಎಲ್.ಆರ್. ೦೩ : ಶ್ರೀನಿವಾಸಪುರ ತಾಲ್ಲೂಕು, ಕೋಡಿಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಲ್ಲದೆ ಮುಚ್ಚಿರುವುದು.