ತರೀಕೆರೆಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಮನ ಮಂಥನ ಸಂವಾದ ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಎಂ.ಗಿರಿಜಾ, ಸಿ.ಆರ್.ಅನಂತಪ್ಪ, ಡಾ. ಟಿ.ಎಂ.ದೇವರಾಜ್ ಇತರರಿದ್ದರು. 
ನ್ಯೂಸ್

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ

ತರೀಕೆರೆ: ಇಂದಿನ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಪ್ರಶ್ನಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಚಿಕ್ಕಮಗಳೂರು ಯುವ ಸ್ಫೂರ್ತಿ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ್ದ ಮನ ಮಂಥನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2ಜಿ ಸ್ಪೆಕ್ಟ್ರಂ ಇತರ ಹಗರಣಗಳಲ್ಲಿ ಲಕ್ಷಾಂತರ ಕೋಟಿ ರೂ. ಹಗರಣ ನಡೆದಿದ್ದು ಅಪ್ರಬುದ್ಧ ರಾಜಕಾರಣಿಗಳು, ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಂದ ಸಮಾಜ ಹದಗೆಡುತ್ತಿದೆ. ಭ್ರಷ್ಟಾಚಾರ

ಹೆಚ್ಚಾಗುತ್ತಿದ್ದು ದೇಶದ 221 ಸಂಸದರ ಮೇಲೆ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ರಾಜಕಾರಣ ಸೇವೆಯಾಗಿ ಉಳಿಯದೆ ವ್ಯಾಪಾರವಾಗಿ ಬದಲಾಗಿದೆ. ಸಮಾಜದಲ್ಲಿ ಪ್ರಾಮಾಣಿಕರನ್ನು

ಹುಚ್ಚರಂತೆ ನೋಡುವ ಪರಿಸ್ಥಿತಿ ಎದುರಾಗಿದೆ. ಸ್ವಸ್ಥ ಸಮಾಜ ನಿರ್ಮಾಣವಾಗಬೇಕೆಂದರೆ ಜನ ಜಾಗೃತಗೊಳ್ಳಬೇಕು ಎಂದರು.

ರಾಜ್ಯದ ವಿವಿಧೆಡೆಯ 1,866 ಶಾಲೆಗಳಲ್ಲಿ ಭ್ರಷ್ಟಾಚಾರ ತೊಲಗಿಸಲು ಆಯೋಜಿಸಿದ್ದ ಕಾರ್ಯಾಗಾರಗಳಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದು ಇಂಥ ಕಾರ್ಯಕ್ರಮಗಳ ಮೂಲಕ

ದೊಡ್ಡವರಿಗಲ್ಲದಿದ್ದರೂ ಸಹಸ್ರಾರು ಮಕ್ಕಳನ್ನು ತಿದ್ದುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕು. ಭ್ರಷ್ಟಾಚಾರ ತೊಲಗಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಪುರಸಭೆ

ಉಪಾಧ್ಯಕ್ಷೆ ಎಂ.ಗಿರಿಜಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಅನಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಟಿ.ಎಂ.ದೇವರಾಜ್ ಮತ್ತಿತರರಿದ್ದರು.