ನ್ಯೂಸ್

ಮಂದಿರ ನಿರ್ಮಾಣಕ್ಕೆ 51 ಸಾವಿರ ರೂ. ನೀಡಿದ ಶೆಕ್ಷಾ ವಲಿ

ಬಳ್ಳಾರಿ:
ನಗರದ ಸಿದ್ದಾರ್ಥ ಕಾಲನಿ ನಿವಾಸಿ ಶೆಕ್ಷಾ ವಲಿ ರಾಮಮಂದಿರ ನಿರ್ಮಾಣಕ್ಕೆ 51 ಸಾವಿರ ರೂ. ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಿಯಲ್ ಎಸ್ಟೇಟ್ ವಲಯದಲ್ಲಿ ಕೆಲಸ ಮಾಡುವ ಶೆಕ್ಷಾವಲಿ, ನಾನು ಆಂಜನೇಯ ಸ್ವಾಮಿಯ ಭಕ್ತನಾಗಿದ್ದೇನೆ. ಚಿಕ್ಕವನಿದ್ದಾಗಿನಿಂದ ನಗರದ ಬಾಲಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತೇನೆ. ಆಂಜನೇಯನ ಅನುಗ್ರಹದಿಂದ ಚೆನ್ನಾಗಿದ್ದೇನೆ. ಆಂಜನೇಯ ಶ್ರೀರಾಮನ ಪರಮ ಭಕ್ತ. ಇದರಿಂದಾಗಿ ರಾಮ ಮಂದಿರ ನಿರ್ಮಾಣಕ್ಕೆ 51 ಸಾವಿರ ರೂ. ದೇಣಿಗೆ ನೀಡಿರುವುದಾಗಿ ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲನಗೌಡ, ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಕಾರ್ಯದರ್ಶಿ ಎರ್ರೆಣ್ಣ ಹಾಗೂ ಇತರರು ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಶೆಕ್ಷಾ ವಲಿ ಅವರನ್ನು ಭೇಟಿ ಮಾಡಿದಾಗ ನಿಧಿ ಸಮರ್ಪಿಸಿದ್ದಾರೆ. ಶೆಕ್ಷಾ ವಲಿ ಅವರ ಜಾತ್ಯತೀತ ಮನೋಭಾವ ಮೆಚ್ಚಬೇಕಾಗಿದೆ ಎಂದು ಸಂಗಮೇಶ್ವರ ದೇವಸ್ಥಾನದ ಕಾರ್ಯದರ್ಶಿ ಎರ್ರೆಣ್ಣ ತಿಳಿಸಿದರು.