ಮಂಗಳೂರು:ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 31.73 ಲಕ್ಷ ರೂ. ಮೌಲ್ಯದ 664 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕಸಬ ಬೆಂಗ್ರೆಯ ಮೊಹಮ್ಮದ್ ಹರ್ಷದ್ ಅಕ್ರಮ ಚಿನ್ನ ಸಾಗಾಟ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಚಿನ್ನವನ್ನು ಹುಡಿ ಮಾಡಿ ಅಂಟಿನೊಂದಿಗೆ ದೇಹದೊಳಗಿಟ್ಟು ಸಾಗಾಟ ಮಾಡಿದ್ದ.