ನ್ಯೂಸ್

ಮಂಗಳೂರು ತಲುಪಿದ ಕೋವಿಶೀಲ್ಡ್ ಲಸಿಕೆ

ಮಂಗಳೂರು:ಕೋವಿಶೀಲ್ಡ್ ಲಸಿಕೆ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಗುರುವಾರ ಬೆಳಗ್ಗೆ ಮಂಗಳೂರು ತಲುಪಿದೆ. ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಲಸಿಕೆಯೂ ಇದರ ಜತೆಗಿದ್ದು ಅಲ್ಲಿನ ಆರೋಗ್ಯಾಧಿಕಾರಿಗಳು ಆಗಮಿಸಿ ತೆಗೆದುಕೊಂಡು ಹೋಗಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ 24,500, ಚಿಕ್ಕಮಗಳೂರು ಜಿಲ್ಲೆಗೆ 6 ಸಾವಿರ ಹಾಗೂ ಉಡುಪಿ ಜಿಲ್ಲೆಗೆ 12 ಸಾವಿರ ಸೇರಿದಂತೆ ಒಟ್ಟು 42,500 ಕೋವಿಶೀಲ್ಡ್ ಲಸಿಕೆ ಮಂಗಳೂರಿನಲ್ಲಿ ಅನ್ ಲೋಡ್ ಆಗಿದೆ. ಎಲ್ಲವೂ ಸುಸ್ಥಿತಿಯಲ್ಲಿದ್ದು, ವ್ಯಾಕ್ಸಿನ್ ಸ್ಟೋರ್ ನಲ್ಲಿ ಶೇಖರಿಸಿಡಲಾಗಿದೆ.

ದ.ಕನ್ನಡ ಜಿಲ್ಲೆಯ ವೆನ್ಲಾಕ್, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ.16 ರಂದು ಲಸಿಕೆ ವಿತರಣೆಗೆ ಚಾಲನೆ ಸಿಗಲಿದೆ ಎಂದು ಡಾ.ರಾಜೇಶ್ ತಿಳಿಸಿದ್ದಾರೆ.