ನ್ಯೂಸ್

ಮಂಗಳೂರಿನಲ್ಲಿ4 ಕೋಟಿ ಮೌಲ್ಯದ ಚಿನ್ನ ವಶ

ಮಂಗಳೂರು: ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಬೃಹತ್ ಅಕ್ರಮ ಚಿನ್ನ ಸಾಗಾಟ ಜಾಲವನ್ನು ಭೇದಿಸಿದ್ದು ಒಟ್ಟು 4 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕೆಟ್, 5.2 ಕೆಜಿ ಬೆಳ್ಳಿ ಹಾಗೂ 84 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ.ಕಂದಾಯ ಗುಪ್ತಚರ ಇಲಾಖೆಯ ಮಂಗಳೂರು, ಶಿವಮೊಗ್ಗ ಹಾಗೂ ಬೆಂಗಳೂರಿನ ಒಟ್ಟು 40 ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಮಂಗಳೂರಿನಿಂದ ಉಡುಪಿ ಶಿವಮೊಗ್ಗ ವರೆಗೂ ಹರಡಿರುವ ಚಿನ್ನ ಕರಗಿಸಿ ಮಾರಾಟ ಮಾಡುವ ಜಾಲವನ್ನು ಭೇದಿಸಿದ್ದಾರೆ.
ಮಾರ್ಚ್ 11ರಂದು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 5.6 ಕೆಜಿ ತೂಕದ ಚಿನ್ನದ ಬಿಲ್ಲೆ ವಶಪಡಿಸುವದರೊಂದಿಗೆ ಕಾರ್ಯಾಚರಣೆ ಪ್ರಾರಂಭಗೊಂಡಿತ್ತು.