ನ್ಯೂಸ್

ಭೂಮಿಗೆ ಪರಿಹಾರ ನೀಡುವ ತನಕ ರಸ್ತೆ ಕಾಮಗಾರಿ ನಡೆಸಬಾರದು ಎಂದು ಗ್ರಾಮಸ್ಥರ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೈಗಾರಿಕಾ ಪ್ರಾಂಗಣಕ್ಕೆ ಜಮೀನು ನೀಡಿ ೬ ವರ್ಷ ಕಳೆದರೂ ಇನ್ನು ಕೆಲವರಿಗೆ ಪರಿಹಾರ ನೀಡಿಲ್ಲ. ಪರಿಹಾರ ನೀಡದೆ ಮತ್ತೆ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವ ಕೆ.ಐ.ಎ.ಡಿ.ಬಿ ರವರ ವಿರುದ್ಧ ಗುರುವಾರ ಭಾನವಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪರಿಹಾರಕ್ಕೆ ಒತ್ತಾಯಪಡಿಸಿದರು.

ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು ಭಾವನಹಳ್ಳಿ ಗ್ರಾಮಸ್ಥರು ಕೈಗಾರಿಕಾ ಪ್ರದೇಶಕ್ಕಾಗಿ ೭೨೨ ಎಕರೆ ಭೂಮಿಯನ್ನು ರೈತರು ನೀಡಿದ್ದು, ೪೦೦ ರೈತರ ಪೈಕಿ ೨೦೦ ಕ್ಕೂ ಹೆಚ್ಚು ರೈತರಿಗೆ ಕೆ.ಐ.ಎ.ಡಿ.ಬಿ.ಯಿಂದ ಪರಿಹಾರ ನೀಡಿಲ್ಲ ಎಂದು ಭೂಮಿ ಕಳೆದುಕೊಂಡಿರುವ ರೈತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಭಾವನಹಳ್ಳಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಈಗಾಗಲೇ ಜಮೀನಿನಲ್ಲಿ ಕೆ.ಐ.ಎ.ಡಿ.ಬಿ ರವರು ರಸ್ತೆ ನಿರ್ಮಾಣ ಮಾಡಲು ಹೊರಟಿದ್ದಾರೆ. ರೈತರಿಗೆ ಪರಿಹಾರ ನೀಡಿ ರಸ್ತೆ ನಿರ್ಮಾಣ ಮಾಡಿ ಎಂದು ರೈತರು ಆಗ್ರಹಿಸಿದರು.

ರಸ್ತೆ ಮಾಡಲು ಮುಂದಾಗಿದ್ದ ಕೆ.ಐ.ಎ.ಡಿ.ಬಿ ಅಧಿಕಾರಿಗಳಿಗೆ ರೈತರು ಅಡ್ಡಿಪಡಿಸಿದ ಕಾರಣ ರಸ್ತೆ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ಸು ತೆರಳಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ್, ಹಾಲಿ ಅಧ್ಯಕ್ಷರಾದ ಕಾಂತಮ್ಮ, ಗ್ರಾಮಸ್ಥರಾದ ಮಹೋಹರ್, ಶ್ರೀನಿವಾಸರೆಡ್ಡಿ, ಬಿ.ಟಿ.ರಾಮಪ್ಪ, ವೆಂಕಟಸ್ವಾಮಿ, ಸೂರಪ್ಪ, ಈರಣ್ಣ, ಚಿಕ್ಕನಾರಾಯಣಗೌಡ, ಮುನಿವೆಂಕಟೇಗೌಡ, ನಾಗರಾಜ್, ನಾರಾಯಣಮ್ಮ, ಮುನಿಯಮ್ಮ, ಸರಸ್ವತಮ್ಮ, ಕೃಷ್ಣಸಿಂಗ್, ಸಾದಪ್ಪ, ಪ್ರದೀಪ್, ಸುಜಯ್, ಗಣೇಶ್, ಮುರಳಿ ಮುಂತಾದವರು ಇದ್ದರು.

ಚಿತ್ರ ೧೭ ಕೆ.ಎಲ್.ಆರ್. ೦೨ : ಕೈಗಾರಿಕಾ ಪ್ರಾಂಗಣಕ್ಕೆ ನೀಡಿರುವ ಜಮೀನಿಗೆ ಪರಿಹಾರ ನೀಡದೆ ರಸ್ತೆ ಕಾಮಗಾರಿ ನಡೆಸುತ್ತಿದ್ದ ಕೆ.ಐ.ಎ.ಡಿ.ಬಿ ಅಧಿಕಾರಿಗಳ ವಿರುದ್ಧ ಭಾವನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.