ನ್ಯೂಸ್

ಭಾವೈಕ್ಯದ ಹಬ್ಬ ಮೊಹರಂಗೆ ತೊಗರಿ ನಾಡಿನಲ್ಲಿ ಸಂಭ್ರಮದ ತೆರೆ

ಆಲಾಯಿ ಆಡಿದ ಯುವ ಸಮೂಹ | ಮಾತಂ ಮೂಲಕ ದೇಹ ದಂಡಿಸಿದ ಶಿಯಾ ಯುವಕರು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಾವೈಕ್ಯತೆಯ ಮೊಹರಂ ಹಬ್ಬವು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಒಬ್ಬಂತ್ತು ದಿನಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದ ಮೊಹರಂಗೆ  ಹತ್ತನೇ ದಿನವಾದ ಶನಿವಾರ ಸಂಭ್ರಮದ ತೆರೆ ಬಿದ್ದಿತು.
ನಗರದ ದರ್ಗಾ ಪ್ರದೇಶ, ರೋಜಾ ಬಡಾವಣೆ, ಎಂಎಸ್‌ಕೆ ಮಿಲ್ ಏರಿಯಾ, ಮುಸ್ಲಿಂ ಸಂಘ, ಆಜಾದಪುರ ಸೇರಿದಂತೆ ಹಲವಾರು ಬಡಾವನೆಗಳಲ್ಲಿ ಆಲಾಯಿ ದೇವರ ಮೆರವಣಿಗೆ ನಡೆಯಿತು.  ಫೀರಾ (ಆಲಾಯಿ ದೇವರ) ಕೂರಿಸಿದ  ಸ್ಥಳದ ಎದುರು ದಿನವಿಡೀ ಹೆಜ್ಜೆ ಹಾಕಿ ಆಲಾಯಿ ಆಡುವ ಮೂಲಕ ಯುವಕರು ಸಂಭ್ರಮಿಸಿದರು. ಕೆಲ ಕಡೆಗಳಲ್ಲಿ ಯುವಕರು ಆಲಾಯಿ ಆಡುತ್ತ ಮಡಿಕೆಗೆ ಹೆಣಿಕೆ ಹಾಕಿ ಹೆಜ್ಜೆ ಹಾಕುವುದು ಮತ್ತು ಬಿಚ್ಚುವುದು ನೋಡುಗರಿಗೆ ಖುಷಿ ತರಿಸಿತು.
ಕಲಬುರಗಿ, ಕಮಲಾಪುರ,ಜೇವರ್ಗಿ, ಅಫಜಲಪುರ, ಕಾಳಗಿ, ಆಳಂದ, ಚಿತ್ತಾಪುರ, ಸೇಡಂ,ಚಿAಚೋಳಿ, ಶಹಾಬಾದ, ಯಡ್ರಾಮಿ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಮೊಹರಂ ಮೆರವಣಿಗೆ ನಡೆಯಿತು.
ಬೆಳಗ್ಗೆಯಿಂದಲೇ ಆಲಾಯಿ ದೇವರನ್ನು ಹೊತ್ತುಕೊಂಡು ಗಲ್ಲಿ ಗಲ್ಲಿಗಳಲ್ಲಿ ಮನೆಗೆ ಮನೆಗಳಿಂದಾಗ ನೀರು ಹಾಕಿ ನೈವೇದ್ಯ ನೀಡುತ್ತಿರುವುದು ಕಂಡು ಬಂದಿತು.  ಸಂಜೆಯಿAದಲೇ ಅಹೋರಾತ್ರಿ ಆಲಾಯಿ ದೇವರನ್ನು ಹೊತ್ತು  ಹಳ್ಳಿಗಳಲ್ಲಿ ಮತ್ತು ನಗರದ ಪ್ರದೇಶಗಳಲ್ಲಿ ಪ್ರದಕ್ಷಿಣೆ ಹಾಕಿದ ಬಳಿಕ ದಫನ್ ಮಾಡಲಾಯಿತು. ನಂತರ ಭಕ್ತರು ಕರ್ಪೂರ, ಊದುಬತ್ತಿ, ಸಕ್ಕರೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು.
ಮಾತಂ ಮಾಡಿದ ಯುವಕರು
ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮುಸ್ಲಿಂ ಶಿಯಾ ಸಮುದಾಯದ ಯುವಕರು ಮಾತಂ ಮಾಡುವ ಮೂಲಕ ಗಮನ ಸೆಳೆದರು. ತಾರಫೈಲ್ ಬಡಾವಣೆಯಿಂದ ಮೆರವಣಿಗೆ ಮೂಲಕ ಪಟೇಲ್ ವೃತ್ತಕ್ಕೆ ಬಂದ ಯುವಕರು ಮಾತಂ (ದೇಹವನ್ನು ದಂಡಿಸುವುದು ಇಲ್ಲವೆÀ ತಮ್ಮಷ್ಟಕ್ಕೆ ತಾವೇ ನೋವು ಮಾಡಿಕೊಳ್ಳುವುದು) ಚಾಟಿಯಂತ ವಸ್ತುವಿಂದ ದಂಡಿಸಿಕೊAಡರು.  ಹರಿತವಾದ  ವಸ್ತುಗಳಿಂದ ಮೈಗೆ ಪರಿಚಿಕೊಂಡ ರಕ್ತ ಸುರಿಸಿದರು. ದೈವವಾಗಿರುವ ಇಮಾಮ್ ಹಸೇನ್ ಅಗಲಿಕೆಯಾದ ದಿನವಾಗಿದ್ದರಿಂದ ಅವರ  ಸ್ಮರಣೆ ಮಾಡಿಕೊಂಡು ನೋವಿನಿಂದ ಮಾತಂ ಮಾಡುವ ಸಂಪ್ರದಾಯವಿದೆ.