ನ್ಯೂಸ್

"ಭಾರತ ಐಕ್ಯತಾ ಯಾತ್ರೆ" ಹಿನ್ನೆಲೆ ಅಂತರರಾಜ್ಯ ವಾಹನ ಸಂಚಾರ ಮಾರ್ಗ ಬದಲಾವಣೆ..

ಚಾಮರಾಜನಗರ: ಕಾಂಗ್ರೆಸ್‌ನಿಂದ ಸೆ.30ರಂದು ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆ‌ ಹಿನ್ನೆಲೆಯಲ್ಲಿ ಅಂತರರಾಜ್ಯ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಆದೇಶ ಹೊರಡಿಸಿದ್ದಾರೆ.

ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ ತಿಳಿಸಲಾಗಿದೆ. ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು ಗುಂಡ್ಲುಪೇಟೆ ಕಗ್ಗಳದಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ- ಹೊಂಗಹಳ್ಳಿ- ಮೂಕಹಳ್ಳಿ- ಮುಂಟಿಪುರ- ಬರಗಿ- ದೇಶಿಪುರ- ಆಲತ್ತೂರು ಮಾರ್ಗವಾಗಿ ಮೈಸೂರಿಗೆ ತೆರಳಬೇಕು.

ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಳೆಹೊಳೆ ಮಾರ್ಗವಾಗಿ ಊಟಿಗೆ ತೆರಳುವ ವಾಹನಗಳು ಗುಂಡ್ಲುಪೇಟೆಯ ಕಗ್ಗಳದಹುಂಡಿ ಕ್ರಾಸ್ ಬಳಿಯಿಂದಬೇರಂಬಾಡಿ- ಬೀಚನಹಳ್ಳಿ- ಲಕ್ಕಿಪುರ- ದೇವರಹಳ್ಳಿ- ಹಂಗಳ ಮಾರ್ಗವಾಗಿ ಊಟಿಗೆ ತೆರಳಬೇಕು. ಊಟಿ ಕಡೆಯಿಂದ ಮೈಸೂರಿಗೆ ಬರುವ ವಾಹನಗಳು ಹಂಗಳ- ಹಂಗಳಪುರ- ಶಿವಪುರ- ಕೋಡಹಳ್ಳಿ- ಅಣ್ಣೂರು ಕೇರಿ ಮೂಲಕ ಗುಂಡ್ಲುಪೇಟೆ ಕೋಡಹಳ್ಳಿ ಸರ್ಕಲ್ ಬಳಿ ಚಾಮರಾಜನಗರ ರಸ್ತೆ ಮೂಲಕ ಮೈಸೂರಿಗೆ ತೆರಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.