ವಿಜಯವಾಣಿ ಸುದ್ದಿಜಾಲ ಕೋಲಾರ
ಶ್ರೀನಿವಾಸಪುರ ಪಟ್ಟಣದಲ್ಲಿ ಭಾನುವಾರ ಪೋಲಿಸರು ಹೈ ಅಲರ್ಟ್ ಆಗಿದ್ದರು. ಎಲ್ಲಿ ನೋಡಿದರೂ ಖಾಕಿಪಡೆಗಳು, ಪೋಲಿಸ್ ಜೀಪುಗಳ ಓಡಾಟ ಹೆಚ್ಚಾಗಿತ್ತು. ಸಾರ್ವಜನಿಕರಿಗೆ ಶ್ರೀನಿವಾಸಪುರದಲ್ಲಿ ಏನೋ ನಡೆದಿದೆ ಎಂಬ ಆತಂಕ ಮನೆ ಮಾಡಿತ್ತು.
ಅರಣ್ಯ ಒತ್ತುವರಿ ಸಂದರ್ಭದಲ್ಲಿ ಬೆಳೆ ನಾಶವಾಗಿದ್ದ ಪರಿಣಾಮ ಹಾಗೂ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟ ಮಹಿಳೆಯರನ್ನು ವೀಕ್ಷಿಸಲು ಆಸ್ಪತ್ರೆಗೆ ಸಂಸದ ಮುನಿಸ್ವಾಮಿ ಹಾಗೂ ಮಾಜಿ ಕಂದಾಯ ಸಚಿವ ಆರ್.ಅಶೋಕ್ ಆಗಮಿಸುತ್ತಾರೆಂದು ಶ್ರೀನಿವಾಸಪುರ ಪಟ್ಟಣದಲ್ಲಿ ಪೋಲಿಸ್ ಹೈ ಅಲರ್ಟ್ ಆಗಿತ್ತು.
ಶನಿವಾರ ಒತ್ತುವರಿ ತೆರವು ಕಾರ್ಯಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಜೆಸಿಬಿಗಳನ್ನು ಜಖಂಗೊAಡಿದ್ದು, ಸಂಸದ ಮುಂದಾಳತ್ವದಲ್ಲಿ ಈ ಸಂಬAಧ ಸಂಸದರು ಸೇರಿದಂತೆ ಹಲವರ ಮೇಲೆ ಕೇಸು ದಾಖಲಾಗಿತ್ತು.
ಸಂಸದರ ಮೇಲೆ ಮತ್ತು ಬಿಜೆಪಿ ಮುಂಖಡರು ಹಾಗೂ ರೈತರ ಮೇಲೆ ಕೇಸು ದಾಖಲಾಗಿರುವುದರಿಂದ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಬಹುದು. ಅಥವಾ ಠಾಣೆಗೆ ಮುತ್ತಿಗೆ ಹಾಕಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪೋಲಿಸರು ಎಸ್ಪಿ ನಾರಾಯಣ್ ನೇತೃತ್ವದಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದರು.
ಪೋಲಿಸ್ ಠಾಣೆಗೆ ಹೋಗುವ ಮುಖ್ಯ ದ್ವಾರದಲ್ಲಿಯೇ ನೂರಾರು ಪೋಲಿಸರು ಬೀಡು ಬಿಟ್ಟಿದ್ದರು. ಸಂಸದರು ಆಸ್ಪತ್ರೆಗೆ ಬರುತ್ತಿದ್ದಂತೆಯೇ ಹತ್ತಾರು ಪೋಲಿಸ್ ವ್ಯಾನುಗಳು ಮತ್ತು ಪೋಲಿಸರು ಆಸ್ಪತ್ರೆಯನ್ನು ಸುತ್ತುವರೆದರು. ಆರ್.ಅಶೋಕ್ ಮತ್ತು ಮಾಜಿ ಸಚಿವ ಡಾ. ಸುಧಾಕರ್ ಇವರು ಸಹ ಆಗಮಿಸುತ್ತಾರೆಂಬ ಸುದ್ದಿ ಹರಡಿತ್ತು.
ಇದರಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಹೆಚ್ಚಿನ ಪೋಲಿಸರನ್ನು ನಿಯೋಜನೆ ಮಾಡಲಾಗಿತ್ತು. ಸಂಸದರ ವಿರುದ್ಧ ಕೇಸು ದಾಖಲಾಗಿರುವುದರಿಂದ ಸಂಸದರನ್ನು ಹಾಗೂ ಬಿಜೆಪಿ ಮುಖಂಡರನ್ನು ಬಂಧಿಸುತ್ತಾರೆAಬ ಸುದ್ದಿಯೂ ಸಾರ್ವಜನಿಕರಲ್ಲಿ ಹರಡಿತ್ತು.
ಇದಕ್ಕೂ ಹೆಚ್ಚಾಗಿ ಸಂಸದರ ನೇತೃತ್ವದಲ್ಲಿ ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆ ಮುಂಭಾಗ ಅಥವಾ ಪೋಲಿಸ್ ಠಾಣೆಯ ಮುಂಭಾಗ ಪ್ರತಿಭಟಣೆ ನಡೆಯುತ್ತದೆ. ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸಬೇಕೆಂಬ ಒತ್ತಾಯ ಮಾಡುತ್ತಾರೆಂಬ ಸುದ್ದಿ ಹರಡಿದ್ದರಿಂದ ಪಟ್ಟಣದಲ್ಲಿ ಪೋಲಿಸ್ ಹೈಅಲರ್ಟ್ ಆಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೋಲಿಸ್ ಬಿಗಿಗೊಳಿಸಲಾಗಿತ್ತು.
ಚಿತ್ರ ೧೦. ಕೆ.ಎಲ್.ಆರ್. ೦೭ : ಶ್ರೀನಿವಾಸಪುರ ಪಟ್ಟಣದ ಪೋಲಿಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ಪೋಲಿಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿರುವುದು.