ಕೊಪ್ಪ ತಾಲೂಕಿನ ಹಾಲ್ಮತ್ತೂರು ಸಮೀಪದ ಭಾಗಿ ಹಳ್ಳ ಸೇತುವೆ ಮರು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಶಾಸಕ ಟಿ.ಡಿ. ರಾಜೇಗೌಡರಿಗೆ ಮನವಿ ಮಾಡಿದರು. ಹುಸೇನ್ ಸಾಹೇಬ್, ಬೀಶೇಷ ಭಟ್ ಇತರರಿದ್ದರು. 
ನ್ಯೂಸ್

ಭಾಗಿ ಹಳ್ಳ ಸೇತುವೆ ನಿರ್ಮಾಣ ಭರವಸೆ

ಕೊಪ್ಪ: ತಾಲೂಕಿನ ಹಾಲ್ಮತ್ತೂರಿನಲ್ಲಿರುವ ಭಾಗಿ ಹಳ್ಳ ಸೇತುವೆಗೆ ಲೋಕೋಪಯೋಗಿ ಇಲಾಖೆ ಮೂಲಕ ಅನುದಾನ ಇರಿಸಿ ಸೇತುವೆ ಮರು ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದ್ದಾರೆ. ಭಂಡಿಗಡಿ ಗ್ರಾಪಂಗೆ ಭೇಟಿ ನೀಡಿದ ಸಂದರ್ಭ ಕುಡಿನಲ್ಲಿ, ಛಾವಲ್ಮನೆ, ಭಂಡಿಗಡಿ ಗ್ರಾಮದ ಗ್ರಾಮಸ್ಥರು ಹಾಗೂ ವಿವಿಧ ಪಕ್ಷದ ಮುಖಂಡರು ಶಾಸಕರಿಗೆ ಭಾಗಿ ಹಳ್ಳದ ಸೇತುವೆ ನಿರ್ಮಾಣ ಕುರಿತು ಮನವಿ ಮಾಡಿದಾಗ ಶಾಸಕರು ಮಾಹಿತಿ ನೀಡಿದರು. ಭಂಡಿಗಡಿ ಗ್ರಾಪಂ ಅಧ್ಯಕ್ಷ ಹುಸೇನ್ ಸಾಹೇಬ್, ಸದಸ್ಯರಾದ ಅಂಬಳಿಕೆ ಶ್ರೀಧರ್, ಬಿ.ಎನ್.ಶೇಷ ಭಟ್, ಕಾಗಿನ್ಗುಳ್ಳಿ ರಮೇಶ, ಜ್ಯೋತಿಷಿ ಗಣೇಶ್ ಸೋಮಯಾಜಿ, ಹೊಳೆಕೊಪ್ಪ ಸಂತೋಷ್, ಕುಡಿನಲ್ಲಿ ಪ್ರಕಾಶ್, ಕೆ.ಟಿ.ಸತೀಶ್, ಕೆ.ಟಿ.ಸಂತೋಷ್ ಇತರರಿದ್ದರು.