ಲುಕೋಟೆಯ ರಾಯಗೋಪುರದ ಬಳಿ ಶಾಲಾಮಕ್ಕಳು ಸಂಭ್ರಮಿಸುತ್ತಿರುವುದು. 
ನ್ಯೂಸ್

ಭವ್ಯ ಸ್ಮಾರಕಗಳನ್ನು ಕಣ್ತುಂಬಿಕೊಂಡ ಮಕ್ಕಳು

ಮೇಲುಕೋಟೆ: ರಾಯಗೋಪುರ, ಅಕ್ಕ-ತಂಗಿಕೊಳ, ಕಲ್ಯಾಣಿ ಸಮುಚ್ಚಯ ಮುಂತಾದ ಸ್ಮಾರಕಗಳನ್ನು ಕಣ್ತುಂಬಿಕೊಂಡ ನೂರಾರು ಪುಟಾಣಿಗಳು, ಚೆಲುವನಾರಾಯಣಸ್ವಾಮಿ ದರ್ಶನ ಪಡೆಯುವ ಮೂಲಕ ಮಕ್ಕಳ ದಿನವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಶಾಲೆ, ಯದುಶೈಲಾ ಪ್ರೌಢಶಾಲೆ, ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮೈಸೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದರು. ಮೇಲುಕೋಟೆ ಶಾಲಾ ಮಕ್ಕಳಿಗೆ ಮುಖ್ಯ ಶಿಕ್ಷಕ ಸಂತಾನರಾಮನ್ ಅಕ್ಕತಂಗಿಕೊಳದ ನಿರ್ಮಾಣದ ಇತಿಹಾಸ, ಚೆಲುವನಾರಾಯಣಸ್ವಾಮಿ, ಯೋಗನರಸಿಂಹಸ್ವಾಮಿ ದೇವಾಲಯಗಳ ಮಹತ್ವವನ್ನು ತಿಳಿಸಿದರು.

ಬಾಲಕಿಯರ ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್, ಸಹ ಶಿಕ್ಷಕರಾದ ಮಂಜುಳಾ, ದೈಹಿಕ ಶಿಕ್ಷಣ ಶಿಕ್ಷಕಿ ಜಯಂತಿ, ಅತಿಥಿ ಶಿಕ್ಷಕಿ ಸೌಮ್ಯಾ ಇದ್ದರು. ಮಕ್ಕಳಿಗೆ ಶ್ರೀನಿವಾಸ ನರಸಿಂಹನ್ ಗುರೂಜಿ ಪುಳಿಯೊಗರೆ, ಬಿಸಿಬೇಳೆಬಾತ್, ಮೊಸರನ್ನ, ಗಸಗಸೆ ಪಾಯಸ ನೀಡಿದರು.