ನ್ಯೂಸ್

ಭರತನಾಟ್ಯದಲ್ಲಿ ಕೋಲಾರದ ಕೆ.ಎಸ್.ಮಂಜುನಾಥ್ ಎಂ.ಎ ಪದವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ನಗರದ ಪಿಸಿ ಬಡಾವಣೆಯ ನಿವಾಸಿ ಕೆ.ಎಸ್.ಮಂಜುನಾಥ್ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಭರತ ನಾಟ್ಯದಲ್ಲಿ ಎಂ.ಎ.ಪದವಿ ಪಡೆದುಕೊಂಡಿದ್ದಾರೆ. ಕೆ.ಎಸ್.ಮಂಜುನಾಥ್ ಕೋಲಾರದಲ್ಲಿ ಸುಮಾರು ವರ್ಷಗಳಿಂದ ಭರತನಾಟ್ಯ ಶಾಲೆಗಳನ್ನು ಪ್ರಾರಂಭಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸಿಕೊಟ್ಟಿದ್ದಾರೆ.

ಮಂಜುನಾಥ್ ರವರಿಗೆ ಭರತನಾಟ್ಯದಲ್ಲಿ ಎಂ.ಎ.ಪದವಿ ಪಡೆದುಕೊಂಡಿರುವುದಕ್ಕೆ ಕೋಲಾರ ನಗರದ ಪಿ.ಸಿ.ಬಡಾವಣೆಯ ಜನತೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಹಾಗೂ ಇವರ ಸೇವೆ ಇಲ್ಲೇ ಅಲ್ಲದೆ ರಾಜ್ಯ ಮತ್ತು ರಾಷ್ಟçಕ್ಕೂ ವಿಸ್ತಾರಗೊಳ್ಳಲಿ ಎಂದು ಪಿ.ಸಿ.ಬಡಾವಣೆಯ ಮಾಜಿ ನಗರಸಭಾ ಸದಸ್ಯ ರವೀಂದ್ರ ಕೋರಿದ್ದಾರೆ.

ಚಿತ್ರ ೨೩ ಕೆ.ಎಲ್.ಆರ್. ೦೫ : ಭರತನಾಟ್ಯದಲ್ಲಿ ಎಂ.ಎ.ಪದವಿ ಪಡೆದ ಕೆ.ಎಸ್.ಮಂಜುನಾಥ್ ಭಾವಚಿತ್ರ