ನ್ಯೂಸ್

ಭಯೋತ್ಪಾದಕರ ದಾಳಿಯನ್ನು ಖಂಡಿಸಿ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಗುರುವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಈ ಪ್ರತಿಭಟನೆಯಲ್ಲಿ ಮುಸ್ಲಿಂ ಮುಖಂಡರು ಮತ್ತು ಯವಕರು ಭಾಗಿಯಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಉಗ್ರವಾದಿಗಳನ್ನು ಗಲ್ಲಿಗೇರಿಸಬೇಕೆಂದು ಅವರ ವಿರುದ್ದ ಘೋಷಣೆಯನ್ನು ಕೂಗಿದರು. ಹಾಗೂ ಮೃತಪಟ್ಟವರ ಆತ್ಮಕ್ಕೆ ಶಾಂತಿಸಿಗಲಿ ಎಂದು ೨ ನಿಮಿಷ ಮೌನವನ್ನು ಆಚರಿಸಿದರು.

ರಾಜ್ಯ ಅಲ್ಪಸಂಖ್ಯಾತರ ನಿಗಮದ ನೀರ್ಧೆಶಕರಾದ ಅಬ್ದುಲ್ ಖಯ್ಯೂಂ ಮಾತನಾಡಿ, ಈ ದಾಳಿಯಲ್ಲಿ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ದಿಂದ ೧೦ ಕೋಟಿ ಘೋಷಣೆ ಮಾಡಬೇಕು ಹಾಗೂ ಗಾಯಾಳುಗಳಿಗೆ ೫ ಕೋಟಿ ಘೋಷಣೆಯನ್ನು ಮಾಡಬೇಕೆಂದು ಅಗ್ರಹಿಸಿದರು.

ಕಾಂಗ್ರೇಸ್ ಮುಖಂಡರಾದ ಕೆ.ಎ.ಅನ್ವರ್ ಪಾಷ ಮಾತನಾಡಿ, ಈ ಘಟನೆಯಲ್ಲಿ ಭಾಗಿಯಾಗಿರುವ ಉಗ್ರವಾದಿಗಳನ್ನು ತ್ವರಿತವಾಗಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಈ ಘಟನೆಯನ್ನು ನಮ್ಮ ಸಮುದಾಯ ತಿವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಿಪುರ್ ಅಕ್ರಂ, ಮೊಹಮ್ಮದ್ ಶಾಹೀದ್ ಪಾಷ, ಹಿದಾಯತ್, ಸಲಾವುದ್ದೀನ್ ಬಾಬು, ಅಫ್ರೀದ್, ಸಾದಿಕ್, ಜುನೆದ್, ಇಮ್ರಾನ್,ಸದ್ದಾಂ, ಜಾಫರ್ ಸಾಭ್, ಅನೇಕ ಯುವಕರು ಮುಖಂಡರು ಭಾಗಿಯಾಗಿದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೨ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಗುರುವಾರ ಪ್ರತಿಭಟನೆಯನ್ನು ನಡೆಸಿದರು.