ಎಚ್.ಡಿ.ಕೋಟೆ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಯಂತ್ರಶ್ರೀ ತರಬೇತಿ ಕಾರ್ಯಾಗಾರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಬಿ.ಜೆ.ರಾಜು ಉದ್ಘಾಟಿಸಿದರು. ವೀಣಾ, ಸತೀಶ್, ಮಂಜುನಾಥ್ ಇತರರಿದ್ದರು.  
ನ್ಯೂಸ್

ಭತ್ತ ಬೇಸಾಯದಿಂದ ರೈತರು ವಿಮುಖ

ಎಚ್.ಡಿ.ಕೋಟೆ: ಭತ್ತವು ರಾಜ್ಯದ ಪ್ರಮುಖವಾದ ಬೆಳೆಯಾಗಿರುವುದರ ಜತೆಗೆ ಹೆಚ್ಚು ಬೇಡಿಕೆ ಇರುವ ಆಹಾರ ಬೆಳೆಗಳಲ್ಲಿ ಒಂದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಬಿ.ಜೆ.ರಾಜು ತಿಳಿಸಿದರು.

ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಯಂತ್ರಶ್ರೀ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಹೆಚ್ಚುತ್ತಿರುವ ಬೇಸಾಯದ ಖರ್ಚು ಹಾಗೂ ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದ ರೈತರು ಭತ್ತದ ಬೇಸಾಯದಿಂದ ವಿಮುಕ್ತರಾಗುತ್ತಿದ್ದಾರೆ. ಈ ಸಮಸ್ಯೆಗೆ ಇರುವ ಏಕೈಕ ಪರಿಹಾರವೆಂದರೆ ಭತ್ತ ಬೇಸಾಯವನ್ನು ಯಾಂತ್ರೀಕರಣಗೊಳಪಡಿಸಿ ಬೇಸಾಯ ವೆಚ್ಚವನ್ನು ನಿಯಂತ್ರಿಸುವುದು ಎಂದರು.

ಯಾಂತ್ರೀಕೃತ ವಿಧಾನದಲ್ಲಿ ಆಳ ಮತ್ತು ಅಂತರದಲ್ಲಿ ನಾಟಿ ಮಾಡುವುದು ಅವಶ್ಯಕ ಎಂದ ಅವರು, ಅಂತರಸಂತೆ ಕೃಷಿ ಯಂತ್ರೋಪಕರಣ ಕೇಂದ್ರದಲ್ಲಿ ರೈತರಿಗೆ ಬೇಕಾದ ಎಲ್ಲ ರೀತಿಯ ಯಂತ್ರೋಪಕರಣ ಸಿಗಲಿವೆ ಎಂದರು.

ಸಂಸ್ತೆ ಮೇಲ್ವಿಚಾರಕಿ ವೀಣಾ ಮಾತನಾಡಿದರು. ಸಂಸ್ಥೆಯ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧರಿತ ಸೇವಾ ಕೇಂದ್ರದ ಯೋಜನಾಧಿಕಾರಿ ಸತೀಶ್, ಸೇವಾ ಪ್ರತಿನಿಧಿ ಮಂಜುನಾಥ್ ಇತರರಿದ್ದರು.