ನ್ಯೂಸ್

ಭಟ್ಕಳದಲ್ಲಿ ಗುಡ್ಡ ಕುಸಿತ- ಮಣ್ಣಿನಡಿ ಸಿಲುಕಿದ ನಾಲ್ವರು

ಭಟ್ಕಳ: ಭಾರಿ ಮಳೆಗೆ ಭಟ್ಕಳ ತತ್ತರಿಸಿದೆ.
ಸೋಮವಾರ ಸಾಯಂಕಾಲ 5 ರಿಂದ ಮಂಗಳವಾರ ಬೆಳಗಿನವರೆಗೂ ನಿರಂತರ ಮಳೆಯಾಗಿದ್ದು,ಪಟ್ಟಣ,‌ತಲಾಂದ, ಮಣ್ಕುಳಿ  ಭಾಗಗಳು ಸಂಪೂರ್ಣ ಜಲಾವೃತವಾಗಿವೆ.‌ ನೂರಾರು ಮನೆಗಳಿಗೆ ನೀರು ನುಗ್ಗಿದೆ.
ತಾಲೂಕಿನ‌ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಮನೆಯೊಂದರ ಮೇಲೆ ಗುಡ್ಡ ಕುಸಿದಿದೆ. ಮನೆಯೊಳಗೆ ನಾಲ್ವರು ಇದ್ದರು ಎನ್ನಲಾಗಿದ್ದು, ಅವರ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ.
ಎಸ್ ಡಿಆರ್ ಎಫ್  ತಂಡ ಜನರ ರಕ್ಷಣೆಗೆ ಸ್ಥಳಕ್ಕೆ ಧಾವಿಸುತ್ತಿದೆ.

ಶಾಲೆಗಳಿಗೆ ರಜೆ: ನಿರಂತರ ಮಳೆಯ ಕಾರಣ ಭಟ್ಕಳ ತಾಲೂಕಿನ ಎಲ್ಲ ಶಾಲೆ, ಅಂಗನವಾಡಿ ಕಾಲೇಜ್ ಗಳಿಗೆ ಮಂಗಳವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂಪಿ ಆದೇಶಿಸಿದ್ದಾರೆ.