ಕಳಸ ತಾಲೂಕು ಮಾವಿನಕೆರೆಯಲ್ಲಿ ಚಾಮುಂಡೇಶ್ವರಿ ಗುಳಿಗ ದೈವಗಳ ನೇಮೋತ್ಸವ ನಡೆಯುತ್ತಿರುವುದು. 
ನ್ಯೂಸ್

ಭಗವಾನ್ ಬಬ್ಬುಸ್ವಾಮಿ ನೇಮೋತ್ಸವ

ಕಳಸ: ತಾಲೂಕಿನ ಮಾವಿನಕೆರೆಯ ಶ್ರೀ ಚಾಮುಂಡೇಶ್ವರಿ, ಶ್ರೀ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿ ಸಿಂಗಾರದ ನೇಮೋತ್ಸವ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ನೆರವೇರಿತು.

ಶನಿವಾರ ಭಂಡಾರ ಏರಿದ ನಂತರ ರಾತ್ರಿ ಭಗವಾನ್ ಬಬ್ಬುಸ್ವಾಮಿಯ ನೇಮೋತ್ಸವ ನಂತರ ಆದಿಶಕ್ತಿ ಮಾತೆ ತನಿಮಾನಿಗ ನೇಮೋತ್ಸವ ಹೇಳಿಕೆ-ಕೇಳಿಕೆ ಪ್ರಸಾದ ವಿತರಣೆ ನಡೆಯಿತು.

ಭಾನುವಾರ ಮಧ್ಯಾಹ್ನ ದೇವಿ ಚಾಮುಂಡೇಶ್ವರಿ ಸ್ಥಳ ಗುಳಿಗ, ಕತ್ತಲಕಾನ ಗುಳಿಗ ಮತ್ತು ರಾಹು ದೈವಗಳ ನೇಮೋತ್ಸವ ನಡೆಯಿತು. ಸಂಜೆ ಧೂಮಾವತಿ ಬಂಟ ದೈವದ ನೇಮೋತ್ಸವ, ಪ್ರಸಾದ ವಿತರಣೆ ನೆರವೇರಿತು.

ಭಕ್ತರು ತಮ್ಮ ಕಷ್ಟ ಕಾರ್ಪಣ್ಯ, ಸಮಸ್ಯೆಗಳ ಬಗ್ಗೆ ದೈವಗಳ ಬಳಿ ಹೇಳಿ ಪರಿಹಾರ ಪಡೆದರು. ಹರಕೆಯನ್ನು ಸಂದಾಯ ಮಾಡಿದರು. ತಾಲೂಕಿನ ವಿವಿಧೆಡೆಯಿಂದ ನೂರಾರು ದೈವ ಭಕ್ತರು ಆಗಮಿಸಿದ್ದರು.