ವಿರಾಜಪೇಟೆ ; ಈ ಬಾರಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸ್ಥಾವನ್ನು ಕೊಡವರಿಗೆ ನೀಡಬೇಕು. ಸರ್ಮಥವಾದ ನಾಯಕತ್ವದಿಂದ ಮಾತ್ರ ಜನಸೇವೆ ಸಾಧ್ಯ. ಆ ಮೂಲಕ ಸರ್ಮಥ ನಾಯಕತ್ವದಲ್ಲಿ ಜನಸೇವೆಗೆ ಅವಕಾಶ ನೀಡಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮತ್ತು ಹಿರಿಯ ಪ್ರಮುಖರಾದ ಮೊಳ್ಳೇರ ಸದಾ ಅಪ್ಪಚ್ಚು ಹೇಳಿದರು.
ವಿರಾಜಪೇಟೆ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ಪಕ್ಷದ ಕೊಡವ ಪ್ರಮುಖರ ಸಭೆಯನ್ನು ಉದೇಶಿಸಿ ಮಾತನಾಡಿದರು. ನಾವು ಇಂತಹವರಿಗೆ ಸ್ಥಾನ ನೀಡಿ ಎಂದು ಆಗ್ರಹಿಸುವುದಿಲ್ಲ. ಪಕ್ಷದ ಹಿತಾಸಕ್ತಿಗೆ ವಿರುದ್ದವಾಗಿಯೂ ನಾವಿಲ್ಲ. ಆದರೆ ಈ ತಾಲೂಕಿನಲ್ಲಿ ಪಕ್ಷವನ್ನು ಬೆಳೆಸುವ ಮುನ್ನಡೆಸುವ ಮಹತ್ವದ ಜವಾಬ್ದಾರಿ ತುಂಬ ಇದೆ. ಈ ನಿಟ್ಟಿನಲ್ಲಿ ಗ್ರಾಮ ಗ್ರಾಮಕ್ಕೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷ ಸಂಘಟಿಸಬೇಕು. ಯಾರೆ ಆದರೂ ಸರಿ, ಕೊಡವರಿಗೆ ಈ ಎರಡು ತಾಲೂಕಿನಲ್ಲಿ ಪ್ರಾತಿನಿದ್ಯ ನೀಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಹಿರಿಯ ಮುಖಂಡ ಹಾಗೂ ವಕೀಲ ಎಂ.ಎಸ್. ಪೂವಯ್ಯ ಮಾತನಾಡಿ, ನಾವು ಸಹ ಪಕ್ಷಕ್ಕಾಗಿ ಎಲ್ಲ ರೀತಿಯಲ್ಲಿ ದುಡಿದು ಮಹತ್ವದ ಜವಾಬ್ದಾರಿ ನಿಭಾಯಿಸಿದ್ದೇವೆ. ಕೆಲವು ಬಾರಿ ನಮಗೆ ನಿರಾಸೆ ಬೇಸರ ಮೂಡಿದರು ಪಕ್ಷ ನಿಷ್ಠವಾಗಿ ಕೆಲಸ ಮಾಡುತ್ತಿದ್ದೇವೆ. ಆದರಿಂದ ಸರ್ಮಥವಾಗಿ ಪಕ್ಷ ಮುನ್ನಡೆಸಲು ಕೊಡವರಿಗೆ ಅವಕಾಶ ನೀಡಬೇಕು. ಶಾಸಕ ಪೊನ್ನಣ್ಣ ಸರ್ಮಥ ನಾಯಕ ಇಂತಹ ವಿಚಾರದಲ್ಲಿ ಅವರು ಉತ್ತಮ ನಿರ್ಧಾರ ತಳೆಯಬಲ್ಲರು ಎಂಬ ವಿಶ್ವಾಸ ನಮಗಿದೆ. ಮುಂದೆ ಅವರು ಅಧಿಕಾರ ಮರಳಿ ಪಡೆಯಬೇಕಾದರೆ ಪಕ್ಷವನ್ನು ಇಂದಿನಿಂದಲೇ ಸಮರ್ಥ ನಾಯಕತ್ವದೊಂದಿಗೆ ಮುನ್ನಡೆಸಿ ಬಲ ಗೊಳಿಸಬೇಕಿದೆ ಎಂದರು.
ಹಿರಿಯ ಪ್ರಮುಖ ಮಾಳೇಟಿರ ಕಾಶಿ, ಕೊಳುವಂಡ ಮಂದಪ್ಪ ಮಾಳೇಟಿರ ಕಾಳಯ್ಯ, ಕಾಳಮಂಡ ಮೊಹನ್, ಕುಟ್ಟಂಡ ರಾಬೀನ್, ಉಳ್ಳಿಯಡ ಜೀವನ್, ಮಾಚಿಮಂಡ ಪುಟ್ಟು ,ಐಚೇಟ್ಟಿರ ರಂಜಿ, ಮುಕ್ಕಾಟಿರ ವಿನಿತಾ ಕಾವೇರಮ್ಮ ಮುಂತಾದವರು ಉಪಸ್ಥಿತರಿದ್ದರು.