ನ್ಯೂಸ್

ಬೌದ್ಧ ವಿಹಾರದ ಆಡಳಿತಾಧಿಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಚಿತ್ರದುರ್ಗ: ಸಂವಿಧಾನ ದಿನಾಚರಣೆ ಪ್ರಯುಕ್ತ ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಬಿಟಿ ಆ್ಯಕ್ಟ್-1949 ರದ್ದುಗೊಳಿಸಿ ಬುದ್ಧ ಗಯಾದ ಮಹಾ ಬೋ ಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಭಾರತೀಯ ಬೌದ್ಧ ಮಹಾಸಭಾ ಘಟಕ ದಿಂದ ಮಂಗಳವಾರ ನಗರದಲ್ಲಿ ಪ್ರತಿಭಟಿಸಲಾಯಿತು.

ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ,ಮಹಾಬೋಧಿ ದೇವಾಲಯ ಕಾಯ್ದೆ ಜಾರಿ ಮೂಲಕ ಮನುವಾದಿಗಳು ಮಹಾವಿಹಾರವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದು,ಇದರಿಂದಾಗಿ ಮಹಂತ್ ಬ್ರಾಹ್ಮಣರ ಕೊಠಡಿಯೊಳಗಿರುವ ಬೌದ್ಧ ರಾಜರ ಶಾಸನಗಳ ಜತೆಗೆ ನೂರಾರು ಬುದ್ಧನ ವಿಗ್ರಹಗಳನ್ನು ಮುಕ್ತಗೊಳಿಸಬೇಕು.

ಬ್ರಾಹ್ಮಣರು ಜಗನ್ನಾಥ ಮಂದಿರ ನಿರ್ಮಿಸಿರುವ ಮಹಾವಿಹಾರ ಆವರಣದಲ್ಲಿರುವ ಭೂಮಿ ಹಾಗೂ ಶಂಕರಚಾರ‌್ಯ ಮಠದ ಹೆಸರಲ್ಲಿ ವಿಹಾರದ ಮುಂಭಾಗದ ಒತ್ತುವರಿ ಭೂಮಿ ಮುಕ್ತಗೊಳಿಸಬೇಕೆಂದು ಆಗ್ರಹಿಸಿದರು.

ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ.ಆದರೆ ಬಿಟಿ ಆ್ಯಕ್ಟ್ ಪ್ರಕಾರ ಬೌದ್ಧರಿಗೆ ತಮ್ಮ ದೇವಾಲಯದ ನಿರ್ವಹಣೆ ಅಧಿಕಾರವಿಲ್ಲ. ಬುದ್ಧವಿಹಾರ ಹಿಂದುಗಳ ನಿಯಂತ್ರಣದಲ್ಲಿದೆ. ಇದು ಬೌದ್ಧ ಧರ್ಮಿಯರು,ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ಹಾಗೂ ಸಂವಿಧಾನವಾದಿ ಪ್ರಗತಿಪರ ಚಿಂತಕರ ಸ್ವಾಭಿಮಾನದ ಪ್ರ ಶ್ನೆಯಾಗಿದ್ದು,ಬೌದ್ಧ ಸಮುದಾಯ ಮತ್ತು ಅಂಬೇಡ್ಕರ್ ಅನುಯಾಯಿಗಳು ಧಾರ್ಮಿಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದ ರಿಂದ ಬಿಟಿ ಆಕ್ಟ್ 1949ನ್ನು ರದ್ದುಪಡಿಸ ಬೇಕೆಂದು ಆಗ್ರಹಿಸಿದರು.

ವಕೀಲ ಬೆನಕನಹಳ್ಳಿ ಚಂದ್ರಪ್ಪ ಮಾತನಾಡಿ ಬುದ್ಧಗಯಾದ ಬೌದ್ಧವಿಹಾರ ಬೌದ್ಧರಿಗೆ ಸೇರಿದ್ದದೆಂದರು. ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್,ಪಾಳ್ಯ ಸಿ.ಕುಮಾರ್,ಲೋಕಿಕೆರೆ ಮಂಜುನಾಥ್,ಭೀಮಕೆರೆ ಶಿವಮೂರ್ತಿ,ತುರುವನೂರು ಜಗನ್ನಾಥ್,ರವಿಕುಮಾರ್.ಎಸ್ ನನ್ನಿವಾಳ,ಇ.ನಾಗೇಂದ್ರಪ್ಪ,ಜೆ.ಎನ್.ಬಸವರಾಜ್‌ಜಾಲಿಕಟ್ಟೆ,ಮಂಜುನಾಥ, ಆರ್.ಪಾತಲಿಂಗಪ್ಪ ಇತರರಿದ್ದರು.